ಲಂಡನ್, ನ 10 (DaijiworldNews/HR): ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರ ಆಪ್ತ ಸರ್ ಗೆವಿನ್ ಮಿಲಿಯಮ್ಸ್ನ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಕನ್ಸರ್ವೇಟಿವ್ ಪಕ್ಷದ ತಮ್ಮ ಸಹೋದ್ಯೋಗಿಗಳು ಮತ್ತು ಸರ್ಕಾರಿ ಉದ್ಯೋಗಿಗಳೊಂದಿಗೆ ಅಸಭ್ಯ ವರ್ತನೆ ತೋರಿದ ಆರೋಪವನ್ನು ಗೆವಿನ್ ಎದುರಿಸುತ್ತಿದ್ದು, ಅವರನ್ನು ಸಚಿವ ಸಂಪುಟಕ್ಕೆ ನೇಮಿಸಿದ ರಿಷಿ ಸುನಕ್ ಅವರ ಮೇಲೆ ಪ್ರತಿಪಕ್ಷವು ಗೆವಿನ್ ರಾಜೀನಾಮೆ ಪಡೆಯುವಂತೆ ಒತ್ತಡ ಹೆಚ್ಚಿತ್ತು.
ಇನ್ನು ಸಂಪುಟಕ್ಕೆ ನೇಮಕವಾದ ಕೆಲವು ದಿನಗಳಲ್ಲೇ ಸಚಿವರೊಬ್ಬರು ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ರಿಷಿ ಸುನಕ್ ಅವರ ನಾಯಕತ್ವವನ್ನು ಪ್ರತಿಪಕ್ಷಗಳು ಟೀಕಿಸಿವೆ.