ವಾಷಿಂಗ್ಟನ್, ನ 11 (DaijiworldNews/DB): ಅಮೆರಿಕ ಇಲಿನಾಯ್ಸ ಜನರಲ್ ಅಸೆಂಬ್ಲಿಗೆ ಭಾರತ ಮೂಲದ ನಬೀಲಾ ಸಯ್ಯದ್ ಆಯ್ಕೆಯಾಗಿದ್ದಾರೆ. ರಿಪಬ್ಲಿಕನ್ ಪಕ್ಷದ ಕ್ರಿಸ್ಬೋಸ್ ಅವರನ್ನು ಪರಾಭವಗೊಳಿಸಿ ನಬೀಲಾ ಆಯ್ಕೆಗೊಂಡಿದ್ದಾರೆ.
ಯುನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾದಿಂದ ರಾಜಕೀಯ ಶಾಸ್ತ್ರ ಮತ್ತು ಉದ್ದಿಮೆ ವಿಭಾಗದಲ್ಲಿ ಪದವಿ ಪಡೆದಿರುವ ನಬೀಲಾ ಶೇ. 52.3 ಮತಗಳನ್ನು ಪಡೆದುಕೊಂಡಿದ್ದು, ಇಲಿನಾಯ್ಸ ಜನರಲ್ ಅಸೆಂಬ್ಲಿಗೆ ಆಯ್ಕೆಯಾದ ಕಿರಿಯ ಸದಸ್ಯೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಲ್ಲದೆ ದಕ್ಷಿಣ ಏಷ್ಯಾ ಮೂಲದಿಂದ ಆಯ್ಕೆಯಾದ ಮೊದಲಿಗರು ಕೂಡಾ ಇವರಾಗಿದ್ದಾರೆ.
ಅಮೆರಿಕ ಸಂಸತ್ನ ಮಧ್ಯಂತರ ಚುನಾವಣೆಯಲ್ಲಿ ಈಗಾಗಲೇ ಅಮೆರಿಕದಲ್ಲಿ ನೆಲೆಸಿರುವ ಭಾರತ ಮೂಲದ ಕೆಲವರು ಆಯ್ಕೆಯಾಗಿದ್ದು, ಇದೀಗ ನಬೀಲಾ ಆಯ್ಕೆ ಮುಖಾಂತರ ಭಾರತೀಯರ ಗೆಲ್ಲುವ ಸರಣಿ ಮುಂದುವರಿದಿದೆ.