ಟರ್ಕಿ, ನ 14 (DaijiworldNews/MS): ಟರ್ಕಿಯ ಇಸ್ತಾಂಬುಲ್ನ ಜನಪ್ರಿಯ ಪಾದಚಾರಿ ಮಾರ್ಗವಾದ ಇಸ್ತಿಕಾಲ್ ಅವೆನ್ಯೂದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮೃತರ ಸಂಖ್ಯೆ 6ಕ್ಕೆ ಏರಿಕೆಯಾಗಿದ್ದು,ಘಟನೆಗೆ ಸಂಬಂಧಿಸಿದಂತೆ ಶಂಕಿತ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸೆಂಟ್ರಲ್ ಇಸ್ತಾನ್ಬುಲ್ನ ಇಸ್ತಿಕ್ಲಾಲ್ ಅವೆನ್ಯೂದಲ್ಲಿನ ಜನನಿಬಿಡ ಪಾದಚಾರಿ ರಸ್ತೆಯಲ್ಲಿ ಭಾನುವಾರ ಸ್ಫೋಟ ಸಂಭವಿಸಿದ್ದು ಆರು ಜನರು ಸಾವನ್ನಪ್ಪಿದ್ದು ಮತ್ತು 81 ಜನರು ಗಾಯಗೊಂಡಿದ್ದರು.ಭಾನುವಾರ ಸಂಜೆ ಸುಮಾರು 4.30ಕ್ಕೆ ಸ್ಫೋಟ ಸಂಭವಿಸಿತ್ತು.
ಭಯೋತ್ಪಾದನೆಯ ಕೈವಾಡವಿರಬಹುದು ಎಂದು ಟರ್ಕಿಯ ಅಧ್ಯಕ್ಷ ತಯ್ಯಿಪ್ ಎರ್ಡೊಗನ್ ಹೇಳಿದ್ದರು.ಸಾಮಾಜಿಕ ಜಾಲತಾಣದಲ್ಲಿ ಸ್ಫೋಟದ ನಂತರದ ಹಾಗೂ ರಕ್ಷಣಾ ಕಾರ್ಯದ ವಿಡಿಯೊ ತುಣುಕುಗಳು ಹರಿದಾಡಿವೆ.