ವಾಷ್ಟಿಂಗ್ಟನ್, ನ 18 (DaijiworldNews/MS): ಟ್ವಿಟ್ಟರ್ ಪ್ರಸ್ತುತ ಕಠಿಣ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದೆ. ನೂರಾರು ಉದ್ಯೋಗಿಗಳು ಕಂಪನಿಯ ಟಫ್ ರೂಲ್ಸ್ ಒಪ್ಪಿಕೊಳ್ಳಲು ಸಾಧ್ಯವಾಗದೆ ಸಾಮೂಹಿಕವಾಗಿ ರಾಜೀನಾಮೆಯನ್ನು ನೀಡುತ್ತಿದ್ದಾರೆ.
ಟಫ್ ರೂಲ್ಸ್ಗಳಿಗೆ ಒಗ್ಗಿಕೊಂಡು ಹೋಗಿ ಇಲ್ಲವೇ ಕಂಪನಿ ತೊರೆಯಿರಿ ಎಂದು ಸ್ಟ್ರಿಕ್ಟ್ ಆಗಿ ವಾರ್ನಿಂಗ್ ಟ್ವಿಟರ್ ಮಾಲೀಕ ಇಲಾನ್ ಮಸ್ಕ್ ನೀಡಿದ್ದರು. ಆದರೆ ಕಂಪನಿ ತೊರೆಯಲು ನೀಡಿದ ಗಡುವಿಗೂ ಮೊದಲೇ ನೂರಾರು ಉದ್ಯೋಗಿಗಳು ತಾವಾಗಿಯೇ ರಾಜೀನಾಮೆ ನೀಡಿದ್ದಾರೆ.ಕಂಪನಿಯ ಆಂತರಿಕ ಸಂವಹನ ವೇದಿಕೆಯಲ್ಲಿ ನೂರಾರು ಮಂದಿ ತಾವು ಕೆಲಸಕ್ಕೆ ರಾಜೀನಾಮೆ ನೀಡಿರುವುದಾಗಿ ಘೋಷಣೆ ಮಾಡಿಕೊಂಡಿದ್ದಾರೆ.
ಆದರೆ ನೌಕರರು ಸಾಮೂಹಿಕವಾಗಿ ರಾಜೀನಾಮೆ ಬಗ್ಗೆಯೂ ಮಸ್ಕ್ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಮಸ್ಕ್ ಹೇಳಿದ್ದಾರೆ. ಇದರ ಬಗ್ಗೆ ಟ್ವಿಟರ್ನಲ್ಲಿ ಬಳಕೆದಾರರೊಬ್ಬರು ಮಸ್ಕ್ ಅವರನ್ನು ಟ್ಯಾಗ್ ಮಾಡಿ ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿರುವ ಮಸ್ಕ್, ‘ಉತ್ತಮ ಜನ ಉಳಿದುಕೊಳ್ಳುತ್ತಿದ್ದಾರೆ. ಹೀಗಾಗಿ ನಾನು ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿಲ್ಲ‘ ಎಂದು ಹೇಳಿದ್ದಾರೆ.