ವಾಷಿಂಗ್ಟನ್, ನ 19 (DaijiworldNews/DB): ಟ್ವಿಟರ್ ಸಂಸ್ಥೆಯು ಎಲೋನ್ ಮಸ್ಕ್ ಅವರ ಒಡೆತನಕ್ಕೆ ಬಂದ ಬಳಿಕ ಟ್ವಿಟರ್ನಲ್ಲಿ ಹಲವಾರು ಬದಲಾವಣೆಗಳಾಗುತ್ತಿವೆ. ಇದೀಗ ಮಸ್ಕ್ ಹೊಸ ನೀತಿಯೊಂದನ್ನು ಪ್ರಕಟಿಸಿದ್ದು, ಅದರಂತೆ ಟ್ವಿಟರ್ನಲ್ಲಿ ದ್ವೇಷ ಭಾಷಣವನ್ನು ಉತ್ತೇಜಿಸುವುದಿಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಶನಿವಾರ ಟ್ವೀಟ್ ಮಾಡಿರುವ ಎಲಾನ್ ಮಸ್ಕ್, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹೊಸ ಟ್ವಿಟರ್ ನೀತಿಯು ಪ್ರೋತ್ಸಾಹಿಸುತ್ತದೆ. ಆದರೆ ಇನ್ನು ಮುಂದೆ ದ್ವೇಷವನ್ನು ಬಿತ್ತರಿಸಲು ಅವಕಾಶ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.
ದ್ವೇಷ ಹರಡುವುದು, ನಕಾರಾತ್ಮಕವಾಗಿರು ಟ್ವೀಟ್ಗಳನ್ನು ಟ್ವಿಟರ್ನಲ್ಲಿ ಗರಿಷ್ಠವಾಗಿ ಡೀಬೂಸ್ಟ್ ಮಾಡಲಾಗುತ್ತದೆ. ಯಾವುದೇ ಜಾಹೀರಾತು ಅಥವಾ ಇತರ ಆದಾಯ ಟ್ವಿಟರ್ಗಿಲ್ಲ ಎಂದಿದ್ದಾರೆ.