ಲಂಡನ್, ನ 19 (DaijiworldNews/DB): ಇಂಗ್ಲಿಷ್ನ ಪ್ರಸಿದ್ದ ನಾಟಕಕಾರ ವಿಲಿಯಂ ಶೇಕ್ಸ್ಪಿಯರ್ ಅವರ ಭಾವಚಿತ್ರವೊಂದು ಅಂದಾಜು 97 ಕೋಟಿ ರೂ.ಗಳಿಗೆ ಮಾರಾಟವಾಗಿದೆ.
ಶೇಕ್ಸ್ಪಿಯರ್ ಜೀವಿತಾವಧಿಯಲ್ಲಿ ಚಿತ್ರಿಸಿದ್ದ ಏಕೈಕ ಭಾವಚಿತ್ರ ಇದಾಗಿದೆ. ವೆಸ್ಟ್ ಲಂಡನ್ನ ಗ್ರೋಸ್ವೆನರ್ ಹೌಸ್ ಹೋಟೆಲ್ನಲ್ಲಿ ಈ ಚಿತ್ರವು ಮಾರಾಟದಲ್ಲಿದ್ದು, ಶೇಕ್ಸ್ಪಿಯರ್ ಸಹಿಯನ್ನೂ ಹೊಂದಿದೆ. ಚಿತ್ರದ ಮೇಲೆ 1608 ಇಸವಿಯನ್ನು ನಮೂದಿಸಲಾಗಿದೆ.
ರಾಜ ಜೇಮ್ಸ್ ಅವರ ನ್ಯಾಯಾಲಯದ ವರ್ಣಚಿತ್ರಕಾರ ರಾಬರ್ಟ್ ಬ್ಲೇಕ್ ಈ ಚಿತ್ರವನ್ನು ಬಿಡಿಸಿದವರು ಎನ್ನಲಾಗಿದ್ದು, ಖಾಸಗಿ ಒಪ್ಪಂದದ ಮೂಲಕ ಮಾರಾಟ ಮಾಡಲು ಬಯಸಿದ್ದರು. ಇದೀಗ 10 ಮಿಲಿಯನ್ ಪೌಂಡ್ಗಳಿಗೆ (ಅಂದಾಜು 97 ಕೋಟಿ ರೂ.ಗಳಿಗೆ) ಚಿತ್ರ ಮಾರಾಟವಾಗಿದೆ.
ಈ ಭಾವಚಿತ್ರವನ್ನು ಇಂಗ್ಲೆಂಡ್ನ ಉತ್ತರದಲ್ಲಿರುವ ಡ್ಯಾನ್ಬಿ ಕುಟುಂಬದ ಭವ್ಯ ಮಹಲಿನ ಗ್ರಂಥಾಲಯದಲ್ಲಿ ಈ ಹಿಂದೆ ಪ್ರದರ್ಶಿಸಲಾಗಿತ್ತು.