ಜಕಾರ್ತಾ, ನ 21 (DaijiworldNews/DB): ಇಂಡೋನೇಷ್ಯಾದ ಜಾವಾ ದ್ವೀಪದಲ್ಲಿ ಸೋಮವಾರ 5.4 ತೀವ್ರತೆಯ ಭೂಕಂಪ ಸಂಭವಿಸಿದ್ದು, ಕನಿಷ್ಠ 20 ಮಂದಿ ಮೃತಪಟ್ಟು 300ಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ ನಡೆದಿದೆ.
ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 5.4ರಷ್ಟು ದಾಖಲಾಗಿದ್ದು, ಸಾವುನೋವುಗಳೊಂದಿಗೆ ಹಲವು ಕಟ್ಟಡಗಳಿಗೆ ಹಾನಿಗಳಾಗಿವೆ. ವಾಸದ ಮನೆಗಳೂ ಹಾನಿಗೊಳಗಾಗಿವೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ. ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆಯ ಪ್ರಕಾರ, ಪಶ್ಚಿಮ ಜಾವಾ ಪ್ರಾಂತ್ಯದ ಸಿಯಾಂಜೂರ್ ಪ್ರದೇಶದಲ್ಲಿ 10 ಕಿಲೋಮೀಟರ್ (6.2 ಮೈಲಿ) ಆಳದಲ್ಲಿ ಭೂಕಂಪದ ಕೇಂದ್ರೀಕೃತವಾಗಿತ್ತು ಎನ್ನಲಾಗಿದೆ.
ರಾಜಧಾನಿಯಲ್ಲಿರುವ ಎತ್ತರದ ಕಟ್ಟಡಗಳೆರಡು ಸುಮಾರು ಮೂರು ನಿಮಿಷಗಳಿಗೂ ಹೆಚ್ಚು ಕಾಲ ಅಲುಗಾಡಿವೆ. ಇನ್ನು ಕಂಪನದ ಅನುಭವ ಹೇಳಿಕೊಂಡಿರುವ ವ್ಯಕ್ತಿಯೊಬ್ಬರು, ನಾವು ಒಂಬತ್ತನೇ ಮಹಡಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ತೀವ್ರ ಕಂಪನ ಉಂಟಾಯಿತು. ಕೂಡಲೇ ಅಲ್ಲಿಂದ ನಾನು, ಸಹದ್ಯೋಗಿಗಳು ಓಡಿ ಹೊರ ಬಂದೆವು ಎಂದಿದ್ದಾರೆ.