ಕೊಲಂಬಿಯಾ, ನ 22(DaijiworldNews/MS): ಎಂಟು ಜನರನ್ನು ಹೊತ್ತೊಯ್ಯುತ್ತಿದ್ದ ಸಣ್ಣ ವಿಮಾನವೊಂದು ಸೋಮವಾರ ಕೊಲಂಬಿಯಾದ ಎರಡನೇ ಅತಿದೊಡ್ಡ ನಗರ ಮೆಡೆಲಿನ್ನ ವಸತಿ ಪ್ರದೇಶಕ್ಕೆ ಪತನಗೊಂಡಿದ್ದು, ವಿಮಾನದಲ್ಲಿದ್ದ ಪ್ರಯಾಣಿಸುತ್ತಿದ್ದ ಎಂಟು ಮಂದಿಯೂ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನವು ಬೆಳಿಗ್ಗೆ ಒಲಯಾ ಹೆರೆರಾ ವಿಮಾನ ನಿಲ್ದಾಣದಿಂದ ಟೇಕಾಫ್ ಆಗಿದ್ದು, ಆ ಬಳಿಕ ಕೆಲವೇ ಕ್ಷಣದಲ್ಲಿ ಎಂಜಿನ್ ನಲ್ಲಿ ಕಪ್ಪು ಹೊಗೆ ಕಾಣಿಸಿಕೊಂಡು ವಸತಿ ಪ್ರದೇಶದ ಮೇಲೆ ಪತನಗೊಂಡಿದೆ.
ವಿಮಾನದಲ್ಲಿದ್ದ ಆರು ಪ್ರಯಾಣಿಕರು ಮತ್ತು ಪೈಲೆಟ್ ಸೇರಿ ಇಬ್ಬರು ಸಿಬ್ಬಂದಿ ಎನ್ನಲಾಗಿದೆ. ವಿಮಾನಯಾನ ಸಂಸ್ಥೆ ತಮ್ಮ ಟ್ವಿಟರ್ ನಲ್ಲಿ ತಿಳಿಸಿದೆ.
"ಮನೆಯಲ್ಲಿ ಅಪ್ಪಳಿಸಿದ ಪರಿಣಾಮ ಯಾರಾದರೂ ಗಾಯಗೊಂಡಿದ್ದಾರೆಯೇ ಅಥವಾ ಸಾವನ್ನಪ್ಪಿದ್ದಾರೆಯೇ ಎಂಬ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಬೆಲೆನ್ ರೋಸೇಲ್ಸ್ ಸೆಕ್ಟರ್ನಲ್ಲಿ ವಿಮಾನ ಅಪಘಾತ ಸಂಭವಿಸಿದೆ. ಸಂತ್ರಸ್ತರಿಗೆ ಸಹಾಯ ಮಾಡಲು ಸರ್ಕಾರದ ಸಿದ್ದವಾಗಿದೆ" ಎಂದು ಮೇಯರ್ ಡೇನಿಯಲ್ ಕ್ವಿಂಟೆರೊ ಈ ಹಿಂದೆ ಟ್ವಿಟರ್ನಲ್ಲಿ ಹೇಳಿದ್ದಾರೆ.