ದೋಹಾ, ನ 23 (DaijiworldNews/DB): ದೋಹಾದಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ನಲ್ಲಿ ಉಪನ್ಯಾಸ ನೀಡಲು ಝಾಕಿರ್ ನಾಯ್ಕ್ಗೆ ಯಾವುದೇ ಅಧಿಕೃತ ಆಹ್ವಾನ ನೀಡಿಲ್ಲ ಎಂದು ಕತಾರ್ ಸ್ಪಷ್ಟಪಡಿಸಿದೆ.
ಫಿಫಾ ವಿಶ್ವಕಪ್ ಉದ್ಘಾಟನೆಗೆ ದೋಹಾ ಔಪಚಾರಿಕವಾಗಿ ಇಸ್ಲಾಮಿಸ್ಟ್ ಝಾಕಿರ್ ನಾಯ್ಕ್ ಅವರನ್ನು ಆಹ್ವಾನಿಸಿದ್ದರೆ, ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರ ಭೇಟಿಯನ್ನು ರದ್ದುಪಡಿಸುವಂತೆ ಮೋದಿ ಸರ್ಕಾರವು ದೋಹಾಗೆ ಸೂಚಿಸಿದ ನಂತರ ಕತಾರ್ನಿಂದ ಈ ಸ್ಪಷ್ಟನೆ ಹೊರ ಬಿದ್ದಿದೆ.
ಝಾಕಿರ್ ನಾಯ್ಕ್ಗೆ ಯಾವುದೇ ಆಹ್ವಾನವನ್ನು ಫಿಫಾ ವಿಶ್ವಕಪ್ ಸಂಬಂಧಿಸಿ ನೀಡಿಲ್ಲ. ಭಾರತ ಮತ್ತು ಕತಾರ್ ನಡುವಿನ ದ್ವಿಪಕ್ಷೀಯ ಸಂಬಂಧ ಕೆಡವಲು ಉದ್ದೇಶಪೂರ್ವಕವಾಗಿ ಇತರ ರಾಷ್ಟ್ರಗಳು ತಪ್ಪು ಮಾಹಿತಿ ಪಸರಿಸುತ್ತಿವೆ ಎಂದು ಕತಾರ್ ರಾಜತಾಂತ್ರಿಕ ವ್ಯವಸ್ಥೆಯು ತಿಳಿಸಿದೆ.
2016ರಲ್ಲಿ ಹಣ ಅಕ್ರಮ ವರ್ಗಾವಣೆ ಮತ್ತು ದ್ವೇಷ ಭಾಷಣಗಳ ಮೂಲಕ ಉಗ್ರವಾದವನ್ನು ಪ್ರಚೋದಿಸಿದ ಆರೋಪದಲ್ಲಿ ಇಸ್ಲಾಂ ವಿವಾದಾತ್ಮಕ ಮತ ಪ್ರಚಾರಕ ಜಾಕೀರ್ ನಾಯ್ಕ್ ಪೊಲೀಸರಿಗೆ ಬೇಕಾಗಿದ್ದಾನೆ. ಇದೀಗ ಕತಾರ್ನ ದೋಹಾದಲ್ಲಿ ನಡೆಯುತ್ತಿರುವ ಫಿಫಾ ಫುಟ್ಬಾಲ್ ವಿಶ್ವಕಪ್ನಲ್ಲಿ ಝಾಕಿರ್ ನಾಯ್ಕ್ನನ್ನು ಉಪನ್ಯಾಸಕ್ಕೆ ಆಹ್ವಾನಿಸಲಾಗಿದೆ ಎಂಬ ಸುದ್ದಿ ಹರಿದಾಡಿದ ಬೆನ್ನಲ್ಲೇ ಭಾರತದಲ್ಲಿ ಫಿಫಾ ವಿಶ್ವಕಪ್ಗೆ ನಿರ್ಬಂಧ ಹೇರಬೇಕೆಂಬ ಕೂಗು ಬಲವಾಗಿತ್ತು.