ಅಲ್ಜೀರಿಯಾ, ನ 25 (DaijiworldNews/DB): ವರ್ಣಚಿತ್ರಕಾರನ ಹತ್ಯೆಗೈದ 49 ಮಂದಿ ಅಪರಾಧಿಗಳಿಗೆ ಅಲ್ಜೀರಿಯಾ ನ್ಯಾಯಾಲಯವು ಮರಣದಂಡನೆ ವಿಧಿಸಿ ತೀರ್ಪು ನೀಡಿದೆ.
ಚಿತ್ರಕಲಾವಿದ ಜಮೀಲ್ ಬೆನ್ ಇಸ್ಮಾಯಿಲ್ ಅವರನ್ನು ಕಳೆದ ವರ್ಷ ಹತ್ಯೆ ಮಾಡಲಾಗಿತ್ತು. ಈ ಹತ್ಯೆ ಪ್ರಕರಣದಲ್ಲಿ 100ಕ್ಕೂ ಅಧಿಕ ಮಂದಿ ಭಾಗಿಯಾಗಿದ್ದಾರೆನ್ನಲಾಗಿದ್ದು, ಈ ಪೈಕಿ 49 ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪಿತ್ತಿದೆ. ಇನ್ನು 38 ಮಂದಿ ಅಪರಾಧಿಗಳಿಗೆ 2-12 ವರ್ಷಗಳವರೆಗೆ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ.
ಈಶಾನ್ಯ ಅಲ್ಜೀರಿಯಾದ ಬುಡಕಟ್ಟು ಪ್ರದೇಶದಲ್ಲಿ ನಡೆದಿದ್ದ ಈ ಹತ್ಯಾಕಾಂಡ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಬರ್ಬರ್ ಎಂಬ ಪರ್ವತದ ಪ್ರಾಂತ್ಯದಲ್ಲಿ ಭಾರೀ ಕಾಡ್ಗಿಚ್ಚಿಗೆ 90 ಮಂದಿ ಬಲಿಯಾದ ಘಟನೆ ವೇಳೆಯಲ್ಲಿ ವರ್ಣಚಿತ್ರಕಾರನ ಹತ್ಯೆ ನಡೆದಿತ್ತು ಎಂದು ತಿಳಿದು ಬಂದಿದೆ.