ಇಸ್ಲಾಮಾಬಾದ್,ಫೆ 26(MSP): ಭಾರತೀಯ ವಾಯುಸೇನೆಯ ವಿಮಾನಗಳು ಗಡಿ ನಿಯಂತ್ರಣ ರೇಖೆ ದಾಟಿದ ಕೂಡಲೇ ಪಾಕಿಸ್ತಾನ ಎಚ್ಚೆತ್ತುಕೊಂಡಿತ್ತು. ಹೀಗಾಗಿ ಪಾಕಿಸ್ತಾನ ಸೇನೆ ಎಫ್ -16 ಯುದ್ದ ವಿಮಾನಗಳ ಮೂಲಕ ಭಾರತದ ವಾಯುಸೇನೆಯನ್ನು ಹಿಮ್ಮೆಟಿಸಿದೆ.ಭಾರತದ ಏರ್ ಸ್ಟ್ರೇಕ್ ದಾಳಿಯಲ್ಲಿ ಯಾವುದೇ ಸಾವು ನೋವು ಸಂಭವಿಲ್ಲ ಎಂದು ಪಾಕಿಸ್ತಾನದ ಸೇನೆ ತನ್ನ ಮೊಂಡು ವಾದವನ್ನು ಮುಂದುವರಿಸಿದೆ.
ಭಾರತೀಯ ವಾಯುಪಡೆಯ ವಿಮಾನಗಳು ಭಾರತ – ಪಾಕ್ನ ಗಡಿ ನಿಯಂತ್ರಣ ರೇಖೆಯನ್ನು ದಾಟುತ್ತಿದ್ದಂತೆ ಪಾಕಿಸ್ತಾನ ಸೇನೆಯೂ ಅಲರ್ಟ್ ಆಗಿದ್ದು ಇದಕ್ಕೆ ತಕ್ಕ ಉತ್ತರವನ್ನು ಪಾಕ್ ವಾಯುಪಡೆ ನೀಡಿದೆ. ಇದರಿಂದಾಗಿ ಭಾರತೀಯ ಯುದ್ಧ ವಿಮಾನಗಳು ತಂತ್ರ ಫಲಿಸದೆ ಬರಿಗೈಯಲ್ಲಿ ಹಿಂತಿರುಗಿ ಹೋಗಿವೆ ಎಂದು ಗಫೂರ್ ಟ್ವೀಟ್ ಮಾಡಿದ್ದಾರೆ.
ಆ ನಂತರ ಮತ್ತೊಂದು ಟ್ವೀಟ್ ಮಾಡಿರುವ ಆಸಿಫ್ ಗಫೂರ್, ಮುಜಾಫರ್ನಗರ ಸೆಕ್ಟರ್ನಿಂದ ಭಾರತೀಯ ವಾಯುಪಡೆಯು ಎಲ್ಓಸಿಯನ್ನು ದಾಟಿ ಬಂದಿದೆ. ಪಾಕಿಸ್ತಾನದ ಸೇನೆಯ ಪ್ರತ್ಯುತ್ತರ ನೀಡಿದಾಗ ಆತುರದಲ್ಲಿ ಖಾಲಿ ಜಾಗದಲ್ಲಿ ಬಾಂಬ್ ಹಾಕಿ ಹಿಂತಿರುಗಿ ಹೋಗಿದೆ ಎಂದು ಹೇಳಿದ್ದಾರೆ.