ಸೊಮಾಲಿಯಾ, ನ 28 (DaijiworldNews/HR): ಅಲ್-ಶಬಾಬ್ ಉಗ್ರರು ಸೊಮಾಲಿಯಾದ ಮೊಗಾದಿಶುವಿನ ಹೋಟೆಲ್ ಮೇಲೆ ದಾಳಿ ನಡೆಸಿದ್ದು, ನಾಲ್ಕು ಜನರು ಮೃತಪಟ್ಟಿರುವ ಘಟನೆ ನಡೆದಿದೆ.
ಸೋಮಾಲಿ ರಾಜಧಾನಿಯ ಸಂಸತ್ತು ದಾಳಿಯ ಪರಿಣಾಮವಾಗಿ ನಿಗದಿತ ಅಧಿವೇಶನವನ್ನು ಮುಂದೂಡಿದೆ.
ಇನ್ನು ಅಲ್ ಖೈದಾ ನಂಟು ಹೊಂದಿರುವ ಅಲ್ ಶಬಾಬ್'ನ ದಾಳಿಕೋರರು ಬಂದೂಕುಗಳು ಮತ್ತು ಸ್ಫೋಟಕಗಳನ್ನ ಬಳಸಿ ಹೋಟೆಲ್'ಗೆ ಮುತ್ತಿಗೆ ಹಾಕಿದ್ದು, ಆ ಸಮಯದಲ್ಲಿ ಹೋಟೆಲ್'ನಲ್ಲಿದ್ದ ಕೆಲವು ಸರ್ಕಾರಿ ಅಧಿಕಾರಿಗಳು ಕಿಟಕಿಗಳ ಮೂಲಕ ತಪ್ಪಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.