ಅಮೇರಿಕಾ, ನ 29 (DaijiworldNews/MS): ಯುಎಸ್ ಮಿಸೌರಿ ರಾಜ್ಯದ ಓಝಾರ್ಕ್ಸ್ ಸರೋವರದಲ್ಲಿ ಭಾರತೀಯ ಮೂಲದ ಇಬ್ಬರು ವಿದ್ಯಾರ್ಥಿಗಳು ಮುಳುಗಿ ಸಾವನ್ನಪ್ಪಿದ ಘಟನೆ ನವೆಂಬರ್ 26 ರಂದು ಮಧ್ಯಾಹ್ನ 2.30 ರ ಸುಮಾರಿಗೆ ಸಂಭವಿಸಿದೆ.
ಮೃತರನ್ನು ತೆಲಂಗಾಣದ ಉತ್ತೇಜ್ ಕುಂಟಾ (24 ವರ್ಷ) ಮತ್ತು ಶಿವ ಕೆಲ್ಲಿಗರಿ (24 ವರ್ಷ) ಎಂದು ಮಿಸೌರಿ ಪೊಲೀಸರು ಗುರುತಿಸಿದ್ದಾರೆ.
ಮಿಸೌರಿ ಸ್ಟೇಟ್ ಹೈವೇ ಪೆಟ್ರೋಲ್ ಜಲ ವಿಭಾಗವು ಸೇಂಟ್ ಲೂಯಿಸ್ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿ ಮಾಡುತ್ತಿದ್ದ ವಿದ್ಯಾರ್ಥಿಗಳ ಮೃತದೇಹಗಳನ್ನು ವಶಕ್ಕೆ ಪಡೆದಿದೆ.
ಥ್ಯಾಂಕ್ಸ್ ಗಿವಿಂಗ್ ವಾರಾಂತ್ಯದಲ್ಲಿ ಇಬ್ಬರು ಸ್ನೇಹಿತರು ಈಜಲು ಹೋಗಿದ್ದು, ಉತ್ತೇಜ್ ಕುಂಟಾ ಈಜಲು ನೀರಿಗೆ ಇಳಿದಿದ್ದು ಈ ವೇಳೆ ನೀರಿನಲ್ಲಿ ಮುಳುಗಿದ್ದು ಆತನ ರಕ್ಷಣೆಗೆ ಶಿವ ಕೆಲ್ಲಿಗರಿ ನದಿಗೆ ಹಾರಿದ್ದಾನೆ ಇಬ್ಬರೂ ನೀರಿನಿಂದ ಮೇಲೆ ಬರಲಾಗದೆ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.