ವಾಷಿಂಗ್ಟನ್, ನ. 29 (daijiworldews/HR): ತನ್ನ ಆಪ್ ಸ್ಟೋರ್ನಿಂದ ಟ್ವಿಟ್ಟರ್ ಅನ್ನು ನಿರ್ಬಂಧಿಸುವುದಾಗಿ ಆಪಲ್ ಬೆದರಿಕೆ ಹಾಕಿದ್ದು, ನಿರ್ಬಂಧ ಹೇರಲು ಕಾರಣವೇನು ಎಂಬುದನ್ನೇ ತಿಳಿಸಿಲ್ಲ ಎಂದು ಟ್ವಿಟ್ಟರ್ ಸಿಇಒ ಎಲೋನ್ ಮಸ್ಕ್ ಆರೋಪಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಆಪಲ್ ಕಂಪನಿ ಈಗಾಗಲೇ ತನ್ನ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ನಮ್ಮ ಜಾಹೀರಾತು ನೀಡುವುದನ್ನು ನಿಲ್ಲಿಸಿದ್ದು, ಇದೀಗ ಆಪ್ ಸ್ಟೋರ್ನಿಂದ ಟ್ವಿಟ್ಟರ್ ಅನ್ನು ತೆಗೆದುಹಾಕುವುದಾಗಿ ಬೆದರಿಕೆ ಒಡ್ಡಿದೆ ಎಂದರು.
ಇನ್ನು ಮಸ್ಕ್ ಇತ್ತೀಚೆಗೆ ಟ್ವಿಟ್ಟರ್ನಲ್ಲಿ ಮಾಡಲು ಮುಂದಾಗಿರುವ ಹೊಸ ಬದಲಾವಣೆಗಳ ಕುರಿತು ತಿಳಿಸಿದ್ದಾರೆ.