ರಷ್ಯಾ, ನ 30 (DaijiworldNews/MS): 48,500 ವರ್ಷಗಳ ಹಿಂದೆ ಸರೋವರದ ಅಡಿಯಲ್ಲಿ ಹೆಪ್ಪುಗಟ್ಟಿದ ಮಂಜುಗಡ್ಡೆಯಲ್ಲಿ ಹೂತಿದ್ದ ವೈರಸ್ವೊಂದನ್ನು ಸಂಶೋಧಕರು ಪತ್ತೆಹಚ್ಚಿದ್ದಾರೆ.
ಇದರ ಪತ್ತೆಯೊಂದಿಗೆ ಸಹಸ್ರಾರು ವರ್ಷಗಳಿಂದ ಹೆಪ್ಪುಗಟ್ಟಿರುವ ವೈರಸ್ಗಳು ಮತ್ತೆ ಮರುಕಳಿಸಿ ಸೋಂಕು ಹರಡಬಹುದು ವಿಜ್ಞಾನಿಗಳು ಆತಂಕವನ್ನು ವ್ಯಕ್ತಪಡಿಸಿದ್ದಾರೆ.
ರಷ್ಯಾದ ಸೈಬೀರಿಯಾ ಪ್ರದೇಶದಲ್ಲಿ ಪರ್ಮಾಫ್ರಾಸ್ಟ್ನಿಂದ ಸಂಗ್ರಹಿಸಲಾಗಿದ್ದು 'ಝೋಂಬಿ ವೈರಸ್' ಎಂದು ಕರೆಯುವ 13 ಹೊಸ ರೋಗಕಾರಕಗಳನ್ನು ಸಂಶೋಧಕರು ಪತ್ತೆ ಮಾಡಿದ್ದಾರೆ. ಈ ವೈರಸ್ಗಳು ಅಮೀಬಾ ಸೂಕ್ಷ್ಮಜೀವಿಗಳಿಗೆ ಸೋಂಕು ತಗುಲಿಸುವ ಸಾಮರ್ಥ್ಯವನ್ನು ಹೊಂದಿವೆ. ಪ್ರಾಣಿಗಳು ಅಥವಾ ಮನುಷ್ಯರಿಗೆ ಸೋಂಕು ತಗುಲಿಸುವ ಸಂಭವನೀಯತೆ ಕಡಿಮೆ ಎಂದು ಹೇಳಲಾಗಿದೆ.
ಈ ಪುರಾತನ ವೈರಸ್ಗಳು ಸಹಸ್ರಾರು ವರ್ಷದಿಂದ ನೀರಿನಲ್ಲಿ ಹೆಪ್ಪುಗಟ್ಟಿದ್ದರೂ ಅವು ಇನ್ನೂ ಸಾಂಕ್ರಾಮಿಕವಾಗಿವೆ ಎಂದರೆ ಇನ್ನೂ ರೋಗವನ್ನು ಹರಡುವ ಸಾಮರ್ಥ್ಯವನ್ನು ಉಳಿಸಿಕೊಂಡಿವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.