ಲಂಡನ್, ಡಿ 02 (DaijiworldNews/DB): ತಂದೆ ಒಸಾಮ ಬಿನ್ ಲಾಡೆನ್ ತನ್ನನ್ನೂ ಅವರ ಹಾದಿಯಲ್ಲಿಯೇ ಸಾಗಲು ಬಯಸಿದ್ದರು. ಬಾಲ್ಯದಲ್ಲಿ ಗನ್ ನೀಡಿ ನಾಯಿಗಳ ಮೇಲೆ ರಾಸಾಯನಿಕ ಆಯುಧಗಳ ಪರೀಕ್ಷೆಗೂ ಹೇಳಿದ್ದರು ಎಂದು ಒಸಾಮ ಪುತ್ರ ಒಮರ್ ಬಿನ್ ಲಾಡೆನ್ ಹೇಳಿದ್ದಾರೆ.
ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಅವರು, ತನ್ನ ತಂದೆ ಬದುಕಿರುವವರೆಗೂ ಕೆಟ್ಟ ಸಮಯವನ್ನು ಕಳೆದೆ. ಬಳಿಕ ಅದನ್ನು ಮರೆಯಲು ಯತ್ನಿಸಿದೆ ಎಂದು ಹೇಳಿಕೊಂಡಿದ್ದಾರೆ.
ನನ್ನನ್ನೂ ಅವರ ಹಾದಿಯಲ್ಲಿಯೇ ಮುನ್ನಡೆಸುವುದು ಅವರ ಉದ್ದೇಶವಾಗಿದ್ದರು. ಅಫ್ಘಾನಿಸ್ತಾನದಲ್ಲಿದ್ದಾಗ ಗನ್ ನೀಡಿದ್ದಲ್ಲದೆ, ನಾಯಿಗಳ ಮೇಲೆ ರಾಸಾಯನಿಕ ಆಯುಧಗಳ ಪರೀಕ್ಷೆಗೆ ಒಳಪಡಿಸಿದ್ದರು. ನಾನಾನ ತುಂಬಾ ಚಿಕ್ಕವನಿದ್ದೆ. ಇದೆಲ್ಲ ಯಾಕೆ ಎಂದೇ ನನಗೆ ಅರ್ಥವಾಗುತ್ತಿರಲಿಲ್ಲ ಎಂದಿದ್ದಾರೆ.
ನ್ಯೂಯಾರ್ಕ್ ಮೇಲಿನ ಬಾಂಬ್ ದಾಳಿಗೂ ಮುನ್ನ ಅಂದರೆ 2001ರ ಏಪ್ರಿಲ್ ನಾನು ಅಫ್ಘಾನಿಸ್ತಾನ ತೊರೆದೆ. ನಾನು ಆತನಿಂದ ದೂರವಾಗುವುದು ಆತನಿಗೆ ಇಷ್ಟವಿರಲಿಲ್ಲ. ಆದರೆ ನಾನಂತೂ ಆ ಬಳಿಕ ನಿರಾಳನಾದೆ ಎಂದು ಒಮರ್ ತಿಳಿಸಿದ್ದಾರೆ.