ಹೊಸದಿಲ್ಲಿ, ಫೆ 27(SM): ಭಾರತೀಯ ವಾಯು ಪಡೆ ಕಾರ್ಯಾಚರಣೆಯ ಸಂದರ್ಭದಲ್ಲಿ ನಾಪತ್ತೆಯಾಗಿರುವ ಮಿಗ್ 21 ಪೈಲಟ್ ಅಭಿನಂದನ್ ಅವರು ಪಾಕಿಸ್ಥಾನ ಸೇನೆಯ ವಶದಲ್ಲಿ ಸುರಕ್ಷಿತವಾಗಿದ್ದಾರೆ ಎಂಬುವುದಾಗಿ ಮಾಹಿತಿ ಲಭಿಸಿದೆ. ಪೈಲೆಟ್ ಸುರಕ್ಷಿತವಾಗಿರುವ ಬಗ್ಗೆ ವೀಡಿಯೋವೊಂದು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗುತ್ತಿದೆ. ಆ ವೀಡಿಯೋದಲ್ಲಿ ಅಭಿನಂದನ್ ಚಹಾ ಸೇವಿಸುತ್ತಿದ್ದು ತಾನು ಕ್ಷೇಮವಾಗಿರುವುದಾಗಿ ತಿಳಿಸಿದ್ದಾರೆ.
ಪಾಕ್ನಲ್ಲಿ ಸೇನೆ ವಿಮಾನ ಹೊಡೆದುರುಳಿಸಿದ ಬಳಿಕ ಅಭಿನಂದನ್ ಅವರನ್ನು ಗ್ರಾಮಸ್ಥರು ಮುತ್ತಿಗೆ ಹಾಕಲು ಮುಂದಾದಾಗ ಸೇನೆ ರಕ್ಷಿಸಿ ವಶಕ್ಕೆ ಪಡೆದುಕೊಂಡಿದೆ ಎನ್ನಲಾಗಿದ್ದು, ಅವರನ್ನು ಸುರಕ್ಷಿತವಾಗಿ ನೋಡಿಕೊಂಡಿದ್ದಾರೆ ಎಂದು ಅಭಿನಂದನ್ ಅವರ ಹೇಳಿಕೊಂಡಿದ್ದಾರೆ.
ಭಾರತದ ವಿದೇಶಾಂಗ ಇಲಾಖೆಯು ಅಭಿನಂದನ್ ಅವರ ಕುರಿತಾಗಿ ಪಾಕ್ ಬಳಿ ವಿವರಗಳನ್ನು ಕೇಳಿದೆ. ಪಾಕ್ ಸೇನಾ ಪಡೆಗಳ ವಶದಲ್ಲಿದ್ದ ಅಭಿನಂದನ್ ಅವರ ರಕ್ತ ಸಿಕ್ತ ಮುಖದ ಫೋಟೋಗಳು ವೈರಲ್ ಆಗುವ ಮೂಲಕ ಭಾರತೀಯರಲ್ಲಿ ಆತಂಕಕ್ಕೆ ಕಾರಣವಾಗಿತ್ತು.