ಪೇಶಾವರ, ಡಿ 04 (DaijiworldNews/DB): ಭಯೋತ್ಪಾದಕ ಕಮಾಂಡರ್ನ್ನು ಪಾಕಿಸ್ತಾನದ ಭದ್ರತಾ ಪಡೆಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಪಾಕ್ನ ವಾಯುವ್ಯ ಭಾಗದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಈ ಹತ್ಯೆ ನಡೆದಿದೆ ಎಂದು ಸೇನೆ ತಿಳಿಸಿದೆ.
ಉತ್ತರ ವಜಿರಿಸ್ತಾನದ ಸಾಮಾನ್ಯ ಪ್ರದೇಶವಾದ ಶೇವಾದಲ್ಲಿ ಡಿಸೆಂಬರ್ 2ರಂದು ಎನ್ಕೌಂಟರ್ ನಡೆದಿದ್ದು, ಇದರಲ್ಲಿ ಮುಹಮ್ಮದ್ ನೂರ್ ಅಲಿಯಾಸ್ ಸರಕೈ ಹತ್ಯೆಯಾಗಿದ್ದಾನೆ. ಈತ ಭದ್ರತಾ ಪಡೆಗಳ ವಿರುದ್ದ ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಲ್ಲದೆ, ಅಪಹರಣ, ಸುಲಿಗೆ ಪ್ರಕರಣಗಳಲ್ಲಿಯೂ ಪೊಲೀಸರಿಗೆ ಬೇಕಾದವನಾಗಿದ್ದ ಎಂದು ಸೇನೆಯ ಮಾಧ್ಯಮ ವಿಭಾಗ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ ಶನಿವಾರ ಮಾಹಿತಿ ನೀಡಿದೆ.
ಹತ್ಯೆಯಾದ ಭಯೋತ್ಪಾದಕನಿಂದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.