ನವದೆಹಲಿ, ಡಿ 9 (DaijiworldNews/HR): ಭಾರತವನ್ನು ಧಾರ್ಮಿಕ ಸ್ವಾತಂತ್ರ್ಯ ಕಪ್ಪು ಪಟ್ಟಿಯಿಂದ ಹೊರಗಿಟ್ಟಿರುವ ಅಮೇರಿಕಾದ ನಿರ್ಧಾರಕ್ಕೆ ಪಾಕಿಸ್ತಾನ ಅಸಮಾಧಾನ ವ್ಯಕ್ತಪಡಿಸಿದೆ.
ವಿದೇಶಾಂಗ ಕಚೇರಿಯ ವಕ್ತಾರ ಮುಮ್ತಾಜ್ ಝಾರ ಬಲೂಚ್ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಪಾಕಿಸ್ತಾನ ಬಹು ಧರ್ಮೀಯ ದೇಶವಾಗಿದ್ದು, ಬಹುತ್ವದ ಸಮಾಜವಾಗಿದೆ, ಅನ್ಯ ಮತಗಳೆಡೆಗೆ ಸೌಹಾರ್ದತೆಯ ಶ್ರೀಮಂತ ಪರಂಪರೆ ಹೊಂದಿದೆ ಎಂದು ಹೇಳಿದ್ದಾರೆ.
ಇನ್ನು ಅಮೇರಿಕಾ, ಪಾಕಿಸ್ತಾನ, ಚೀನಾ, ಕ್ಯೂಬಾ, ನಿಕರಾಗುವಾ ಸೇರಿದಂತೆ ಅನೇಕ ರಾಷ್ಟ್ರಗಳನ್ನು ಧಾರ್ಮಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ ಆತಂಕಕಾರಿ ಪರಿಸ್ಥಿತಿಯಲ್ಲಿರುವ ದೇಶಗಳ ಪಟ್ಟಿಗೆ ಸೇರಿಸಿದ್ದು, ಅಮೇರಿಕಾದ ಈ ನಿರ್ಧಾರಕ್ಕೆ ಪಾಕಿಸ್ತಾನ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.