ವಾಷಿಂಗ್ಟನ್, ಡಿ 09 (DaijiworldNews/DB): ಟ್ವಿಟರ್ ಎಲಾನ್ ಮಸ್ಕ್ ತೆಕ್ಕೆಗೆ ಬಂದ ನಂತರ ಟ್ವಿಟರ್ ಸಂಸ್ಥೆಯಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿವೆ. ಇದೀಗ ಇನ್ನೊಂದು ಮಹತ್ವದ ನಿರ್ಧಾರಕ್ಕೆ ಮುಂದಾಗಿದ್ದು, 1.5 ಬಿಲಿಯನ್ ನಿಷ್ಕ್ರಿಯ ಖಾತೆಗಳನ್ನು ಡಿಲೀಟ್ ಮಾಡುವುದಾಗಿ ಹೇಳಿದ್ದಾರೆ.
ಈ ಕುರಿತು ಶುಕ್ರವಾರ ಟ್ವೀಟ್ ಮಾಡಿರುವ ಎಲಾನ್ ಮಸ್ಕ್, ಯಾವುದೇ ಟ್ವೀಟ್ಗಳಿಲ್ಲದ ಮತ್ತು ವರ್ಷಗಟ್ಟಲೆ ಲಾಗ್ ಇನ್ ಆಗದ 1.5 ಬಿಲಿಯನ್ ನಿಷ್ಕ್ರಿಯ ಬಳಕೆದಾರರ ಖಾತೆಗಳನ್ನು ಶೀಘ್ರ ಡಿಲೀಟ್ ಮಾಡಲಾಗುವುದು. ಈ ಕೆಲಸ ತತ್ಕ್ಷಣ ಆರಂಭವಾಗಲಿದೆ ಎಂದಿದ್ದಾರೆ.
ಟ್ವಿಟರ್ ಸಂಸ್ಥೆ ಎಲಾನ್ ಮಸ್ಕ್ ಪಾಲಾದ ಬಳಿಕ ಸಿಇಒ ಬದಲಾವಣೆ ಮಾಡಲಾಯಿತು. ಬಳಿಕ ಉದ್ಯೋಗಿಗಳನ್ನೂ ಕೆಲಸದಿಂದ ತೆಗೆದು ಹಾಕಲಾಯಿತು. ಆ ಬಳಿಕ ಬ್ಲೂಟಿಕ್ಗೆ ಶುಲ್ಕ ವಿಧಿಸುವ ಬಗ್ಗೆಯೂ ಹೇಳಿದ್ದು, ಹಲವರ ಟೀಕೆಗೆ ಗುರಿಯಾಗಿದ್ದರು. ಈ ನಡುವೆ ಇದೀಗ ನಿಷ್ಕ್ರಿಯ ಖಾತೆಗಳನ್ನು ಡಿಲೀಟ್ ಮಾಡುವ ನಿಟ್ಟಿನಲ್ಲಿಯೂ ಮಸ್ಕ್ ಕಾರ್ಯೋನ್ಮುಖರಾಗಿದ್ದಾರೆ.