ಲಾಹೋರ್/ನವದೆಹಲಿ, ಮಾ 04(MSP): ಜೈಷ್–ಎ–ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ, ಉಗ್ರಗಾಮಿ ಮಸೂದ್ ಅಜರ್ ಜೀವಂತವಾಗಿದ್ದಾನೆ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿದೆ.
ರಕ್ತಪಿಪಾಶು , ಪುಲ್ವಾಮಾ ದಾಳಿ ಮಾಸ್ಟರ್ ಮೈಂಡ್ ಅಜರ್ ರಾವಲ್ಪಿಂಡಿ ಆಸ್ಪತ್ರೆಯಲ್ಲಿ ಮಸೂದ್ ಭಾನುವಾರ ಸತ್ತಿದ್ದಾನೆ ಎಂದು ಈ ಮುನ್ನ ಪಾಕ್ ಮಾಧ್ಯಮಗಳು ಸೇರಿದಂತೆ ಜಗತ್ತಿನಾದ್ಯಂತ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಆತನ ಬಗ್ಗೆ ಪಾಕ್ ಸರ್ಕಾರವಾಗಲಿ, ಪಾಕ್ ಸೇನೆಯಾಗಲಿ ಯಾವುದೇ ಅಧಿಕೃತವಾದ ಹೇಳಿಕೆ ನೀಡಿರಲಿಲ್ಲ. ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದ 50 ವರ್ಷದ ಮಸೂದ್ ಅಜರ್ ಪಾಕಿಸ್ತಾನದ ರಾವಲ್ಪಿಂಡಿ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಆದರೆ ಈತ ಚಿಕಿತ್ಸೆಗೆ ಸ್ಪಂದಿಸದೆ ಸಾವಿಗೀಡಾಗಿದ್ದಾನೆ ಎನ್ನಲಾಗಿತ್ತು. ಇನ್ನೊಂದೆಡೆ ಬಾಲಾಕೋಟ್ ತರಬೇತಿ ಶಿಬಿರದ ಮೇಲೆ ಭಾರತ ನಡೆಸಿದ ವಾಯುದಾಳಿಯಲ್ಲಿಯೇ ಈತ ಸತ್ತಿದ್ದಾನೆ ಎಂದು ವರದಿಯಾಗಿತ್ತು.
ಆದರೆ ಉಗ್ರನ ಅಂತ್ಯವಾಯಿತು ಎಂಬ ಸುದ್ದಿ ವಿಶ್ವದಾದ್ಯಂತ ಹಬ್ಬುತ್ತಿದ್ದಂತೆ, ಎಚ್ಚೆತ್ತಿರುವ ಜೈಷ್ ಉಗ್ರ ಸಂಘಟನೆ ಪ್ರಕಟನೆ ಬಿಡುಗಡೆ ಮಾಡಿ ಜೈಷ್ ಮುಖ್ಯಸ್ಥ ಮಜೂರ್ ಜೀವಂತವಾಗಿದ್ದಾನೆ ಆರೋಗ್ಯವೂ ಚೇತರಿಸಿದೆ ಎಂದು ಹೇಳಿದೆ. ಹೀಗಾಗಿ ಇದೀಗ ಯೂರ್ಟನ್ ಹೊಡೆದಿರುವ ಪಾಕ್ ಮಾಧ್ಯಮಗಳು ಮಸೂದ್ ಅಜರ್ ಸತ್ತಿಲ್ಲ ಎಂದು ವರದಿ ಮಾಡುತ್ತಿವೆ.