ವಾಷಿಂಗ್ಟನ್,ಮಾ 05(MSP): ಇನ್ನು ಮುಂದೆ ಆದ್ಯತೆಯ ಮೇರೆಗೆ ಮಾತ್ರ ಭಾರತದೊಂದಿಗೆ ವಹಿವಾಟನ್ನು ನಡೆಸುತ್ತೇವೆ ಎಂದು ಹೇಳುವ ಮೂಲಕ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆ ಮಾಡಿದ್ದಾರೆ.
ಆದ್ಯತೆಗಳ ಸಾಮಾನ್ಯೀಕೃತ ವ್ಯವಸ್ಥೆ (ಜನರಲೈಸ್ಡ್ ಸಿಸ್ಟಂ ಆಫ್ ಬೆನಿಫಿಶಿಯರೀಸ್- ಜಿಎಸ್ಪಿ) ಅಡಿಯಲ್ಲಿ ಭಾರತದಿಂದ ಆಮದಾಗುವ ವಸ್ತುಗಳಿಗೆ ಅಮೆರಿಕ ತೆರಿಗೆಯಿಂದ ವಿನಾಯಿತಿ ನೀಡಿತ್ತು. ಆದರೆ ಭಾರತ ಮತ್ತು ಟರ್ಕಿ ದೇಶಕ್ಕೆ ನೀಡಿದ್ದ ಶೂನ್ಯ ವ್ಯಾಪಾರ ವಿನಾಯಿತಿಯನ್ನು ನಿಲ್ಲಿಸುತ್ತೇವೆ ಎಂದು ಟ್ರಂಪ್ ಹೇಳಿದ್ದಾರೆ.
ಕಡಿಮೆ ತೆರಿಗೆ ಹಾಗೂ ಅಮೆರಿಕ ಮಾರುಕಟ್ಟೆ ಸ್ನೇಹಿ ಪರಿಸರ ಸೃಷ್ಟಿಸಿ ಕೊಡುವುದಾಗಿ ಹೇಳಿದ ಮಾತನ್ನು ಭಾರತ ತಪ್ಪುತ್ತಿದೆ. ಅಮೆರಿಕವನ್ನು ಬಳಸಿಕೊಂಡು ಸಾಕಷ್ಟು ದೇಶಗಳು ಲಾಭ ಮಾಡಿಕೊಳ್ಳುತ್ತಿವೆ ಅದರೆ ಅದೇ ಮಟ್ಟದ ಪರಿಸರವನ್ನು ಅಮೆರಿಕನ್ ಉದ್ಯಮಿಗಳಿಗೆ ಮಾತ್ರ ನಿರ್ಮಾಣ ಮಾಡಿಕೊಡುತ್ತಿಲ್ಲ ಎಂದು ವೈಟ್ ಹೌಸ್ ನಲ್ಲಿ ಅಮೆರಿಕ ಕಾಂಗ್ರೆಸ್ ಸಭೆಯಲ್ಲಿ ಪತ್ರ ಮುಖೇನ ಹೇಳಿದರು.
ಅಮೆರಿಕಾ ಜೊತೆಗಿನ ವ್ಯಾಪಾರದಲ್ಲಿ ಭಾರತವು ಜಗತ್ತಿನ ಅತಿದೊಡ್ಡ ಜಿಎಸ್ಪಿ ಫಲಾನುಭವಿ ದೇಶವಾಗಿದೆ. ಆದ್ರೆ ಇದೀಗಾ ಭಾರತದ ವಿರುದ್ಧ ದಂಡದ ರೀತಿಯಲ್ಲಿ ಟ್ರಂಪ್ ಆಡಳಿತ ಈ ಕ್ರಮಕ್ಕೆ ಮುಂದಾಗಿದೆ. ಭಾರತ ನೂತನ ಇ-ಕಾಮರ್ಸ್ ನಿಯಮಗಳನ್ನು ಜಾರಿಗೊಳಿಸಿದ ಬಳಿಕ ಅಮೆರಿಕದ ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ ಮಾಲೀಕತ್ವ ಹೊಂದಿರುವ ವಾಲ್ ಮಾರ್ಟ್ಗಳ ವಹಿವಾಟಿಗೆ ದೊಡ್ಡ ಏಟು ಬಿದ್ದಿದೆ.