ಲಂಡನ್, ಡಿ 11 (DaijiworldNews/DB): ಟ್ಯೂಟೂ ಹಾಕಿಸಿಕೊಳ್ಳುವುದಕ್ಕೆ ಹಲವರು ಮುಗಿ ಬೀಳುತ್ತಾರೆ. ಆದರೆ ಬ್ರಿಟನ್ನ ಮಹಿಳೆಯೊಬ್ಬರಿಗೆ ಟ್ಯಾಟೂವೇ ಮುಳುವಾದ ಪ್ರಸಂಗ ಬ್ರಿಟನ್ನಲ್ಲಿ ನಡೆದಿದೆ.
800 ಬಾರಿ ಟ್ಯಾಟೂ ಹಾಕಿಸಿದ ಮೆಲಿಸ್ಸಾ ಸ್ಲೋನೆ ಎಂಬ ಮಹಿಳೆಗೆ ಬ್ರಿಟನ್ನಲ್ಲಿ ಪಬ್ಗೆ ಪ್ರವೇಶ ನಿರಾಕರಿಸಲಾಗಿದೆ. ಏಳು ಮಕ್ಕಳ ತಾಯಿಯಾಗಿರುವ ಮೆಲಿಸ್ಸಾ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣದಲ್ಲಿಯೂ ಪೋಸ್ಟ್ ಹಾಕಿದ್ದಾರೆ.
800 ಬಾರಿ ಟ್ಯಾಟೂ ಹಾಕಿಸಿದ್ದರಿಂದ ಇಡೀ ದೇಹ ಮತ್ತು ಮುಖ ಟ್ಯಾಟೂವಿನಿಂದ ಮುಚ್ಚಿದೆ. ಇದರಿಂದ ಆಕೆಯನ್ನು ಗುರುತು ಹಿಡಿಯಲಾಗದೆ ಪಬ್ ಸಿಬಂದಿ ಆಕೆಯನ್ನು ಪಬ್ ಒಳಗೆ ಹೋಗಲು ನಿರಾಕರಿಸಿದ್ದಾರೆ. ಇದೇ ಮೆಲಿಸ್ಸಾ ಆಕ್ರೋಶಕ್ಕೆ ಕಾರಣ.
ಪಾರ್ಟಿಗೆಂದು ನಾನು ಪಬ್ಗೆ ಹೋಗಿದ್ದೆ. ಆದರೆ ನನ್ನನ್ನು ಗುರುತು ಹಿಡಿಯಲಾಗದ್ದಕ್ಕೆ ನನಗೆ ಒಳ ಹೋಗಲು ನಿರ್ಬಂಧ ಹೇರಿದ್ದಾರೆ. ಪಬ್ನಲ್ಲಿ ಕುಡಿಯುವುದು, ಖುಷಿ ಪಡುವುದು ನನಗೆ ಇಷ್ಟ. ಆದರೆ ಅವರು ಹೋಗಲು ಬಿಡದಿರುವುದರಿಂದ ನನಗೆ ಬೇಸರವಾಗಿದೆ ಎಂದಿದ್ದಾರೆ ಮೆಲಿಸ್ಸಾ.