ಜಪಾನ್ ,ಡಿ 13 ( DaijiworldNews/MS): " ಜಪಾನ್ ದೇಶದಲ್ಲಿ ಜನನ ಪ್ರಮಾಣ ದರ ಇಳಿಮುಖವಾಗುತ್ತಿದ್ದು ಹೀಗಾಗಿ ಅಲ್ಲಿನ ಆರೋಗ್ಯ, ಕಾರ್ಮಿಕ ಮತ್ತು ಕಲ್ಯಾಣ ಸಚಿವಾಲಯವು ಮಗುವನ್ನು ಪಡೆಯುವ ಕುಟುಂಬಕ್ಕೆ ಹಣದ ಭರವಸೆಯ ಸಹಾಯ ನೀಡಲು ಮುಂದಾಗಿದೆ ಎಂದು ಜಪಾನ್ ಟುಡೇ ವರದಿ ಮಾಡಿದೆ.
ಮಗುವಿನ ಜನನದ ನಂತರ ಹೊಸ ಪೋಷಕರಿಗೆ ಈವರೆಗೆ 420,000 ಯೆನ್ಗಳ (ರೂ. 2,52,338) ಹೆರಿಗೆ ಮತ್ತು ಶಿಶುಪಾಲನಾ ವೆಚ್ಚಕ್ಕೆ ಅನುದಾನವನ್ನು ನೀಡಲಾಗುತ್ತದೆ. ಆರೋಗ್ಯ, ಕಾರ್ಮಿಕ ಮತ್ತು ಕಲ್ಯಾಣ ಸಚಿವ ಕಟ್ಸುನೋಬು ಕಟೊ ಆ ಮೊತ್ತವನ್ನು500,000 ಯೆನ್ಗೆ (Rs 3,00,402) ಹೆಚ್ಚಿಸಲು ಬಯಸಿದ್ದು, ಇದನ್ನು 2023 ರ ಆರ್ಥಿಕ ವರ್ಷಕ್ಕೆ ಅಂಗೀಕರಿಸುವ ಮತ್ತು ಜಾರಿಗೆ ತರುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ.
2021 ರಲ್ಲಿ ಬಿಡುಗಡೆಯಾದ ಸರ್ಕಾರಿ ಅಂಕಿಅಂಶಗಳ ಪ್ರಕಾರ, ಜಪಾನ್ ಜನನ ಪ್ರಮಾಣ ಇಳಿಮುಖವಾಗುತ್ತಿದೆ. ಈ ಅಂಕಿಅಂಶವು ಜನಸಂಖ್ಯೆಯ ಕುಸಿತದ ದೀರ್ಘಾವಧಿಯ ಪರಿಣಾಮಗಳ ಬಗ್ಗೆ ಭಯವನ್ನು ಹುಟ್ಟುಹಾಕಿದೆ.