ವಾಷಿಂಗ್ಟನ್ ಡಿ 14 ( DaijiworldNews/MS): ಅಮೆರಿಕ ಅಧ್ಯಕ್ಷ ಜೋ ಬೈಡನ್ ಸಲಿಂಗ ವಿವಾಹ ಕಾನೂನಿಗೆ ಸಹಿ ಹಾಕಿದ್ದು ಇದನ್ನು ವೀಕ್ಷಿಸಲು ಮಂಗಳವಾರ ಮಧ್ಯಾಹ್ನ ಸಾವಿರಾರು ಮಂದಿ ಶ್ವೇತಭವನದಲ್ಲಿ ಸೇರಿದ್ದರು. ಬಳಿಕ ಸಂಭ್ರಮಾಚರಣೆ ಮಾಡಿದರು.
'ಈ ಕಾನೂನು ಮತ್ತು ಅದು ರಕ್ಷಿಸುವ ಪ್ರೀತಿಯು ಸಲಿಂಗ ವಿವಾಹವನ್ನು ದ್ವೇಷಿಸುವವರ ವಿರುದ್ಧದ ಪ್ರತಿರೋಧವಾಗಿದೆ. ಅದಕ್ಕಾಗಿಯೇ ಈ ಕಾನೂನು ಪ್ರತಿಯೊಬ್ಬ ಅಮೆರಿಕನ್ನರಿಗೂ ಮುಖ್ಯವಾಗಿದೆ'ಎಂದು ಶ್ವೇತಭವನದ ಸೌತ್ ಲಾನ್ನಲ್ಲಿ ಬೈಡನ್ ಹೇಳಿದರು.
ಗಾಯಕರಾದ ಸ್ಯಾಮ್ ಸ್ಮಿತ್ ಮತ್ತು ಸಿಂಡಿ ಲಾಪರ್ ಹಾಡಿನ ಮೂಲಕ ಅಮೆರಿಕ ಅಧ್ಯಕ್ಷರ ಈ ನಡೆಯನ್ನು ಹಾಡಿನ ಮೂಲಕ ಪ್ರಶಂಶಿಸಿದರು. ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಲೆಸ್ಬಿಯನ್ ವಿವಾಹವನ್ನು ನೆರವೇರಿಸಿದರು.
ಅಮೆರಿಕದ ಎರಡೂ ಪಕ್ಷಗಳ ಸಂಸದರು ಮಂಗಳವಾರದ ಸಮಾರಂಭದಲ್ಲಿ ಭಾಗವಹಿಸಿದ್ದರು. ಇದು ಒಂದೊಮ್ಮೆ ದೇಶದ ಅತ್ಯಂತ ವಿವಾದಾತ್ಮಕ ವಿಷಯಗಳಲ್ಲಿ ಒಂದಾಗಿದ್ದ ಸಲಿಂಗ ವಿವಾಹದ ಬಗ್ಗೆ ಹೆಚ್ಚುತ್ತಿರುವ ಸ್ವೀಕಾರವನ್ನು ಪ್ರತಿಬಿಂಬಿಸಿತ್ತು.
ಸೆನೆಟ್ ಮೆಜಾರಿಟಿ ಲೀಡರ್ ಚಕ್ ಶುಮರ್, ಅವರು ತಮ್ಮ ಮಗಳ ಮದುವೆಗೆ ಧರಿಸಿದ ಸಮಾರಂಭದಲ್ಲಿ ಅದೇ ನೇರಳೆ ಟೈ ಧರಿಸಿದ್ದರು. ಅವರ ಮಗಳು ಅಲಿಸನ್ ಶುಮರ್ ಕೂಡಾ ಸಲಿಂಗ ವಿವಾಹವಾಗಿದ್ದು ಈ ದಂಪತಿಗಳು ವಸಂತಕಾಲದಲ್ಲಿ ತಮ್ಮ ಮೊದಲ ಮಗುವನ್ನು ನಿರೀಕ್ಷಿಸುತ್ತಿದ್ದಾರೆ.