ವಾಷಿಂಗ್ಟನ್ , ಡಿ 15( DaijiworldNews/MS): ಡಿಸೆಂಬರ್ 9ರಂದು ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್ನ ವಾಸ್ತವಿಕ ನಿಯಂತ್ರಣ ರೇಖೆಯ (ಎಲ್ಎಸಿ) ಭಾರತ-ಚೀನಾ ಯೋಧರ ನಡುವಿನ ಸಂಘರ್ಷದ ಬಗ್ಗೆ ಅಮೇರಿಕ ಪ್ರತಿಕ್ರಿಯೆ ನೀಡಿದ್ದು, "ನಮ್ಮ ದೇಶದ ಮಿತ್ರ ರಾಷ್ಟ್ರಗಳ ವಿರುದ್ಧ ಚೀನಾ ಹಕ್ಕು ಪ್ರತಿಪಾದನೆ ಮಾಡುವ ಕೆಲಸ ಮಾಡುತ್ತಿದೆ" ಎಂದು ಟೀಕಿಸಿದೆ.
ಎಲ್ಎಸಿಯಲ್ಲಿನ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ಹೇಳಿದ ಅಮೇರಿಕಾ ನಮ್ಮ ಮಿತ್ರ ರಾಷ್ಟ್ರಗಳ ಭದ್ರತೆಗೆ ನಾವು ಸದಾ ಬದ್ಧರಾಗಿರುತ್ತೇವೆ, ಪರಿಸ್ಥಿತಿಯನ್ನು ತಹಬದಿಗೆ ತರಲು ನಾವು ಭಾರತಕ್ಕೆ ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದು ಹೇಳಿದೆ.
ಅಮೇರಿಕಾದ ರಕ್ಷಣಾ ಇಲಾಖೆ ಪೆಂಟಗನ್ ನ ಮಾಧ್ಯಮ ಕಾರ್ಯದರ್ಶಿ ಏರ್ ಫೋರ್ಸ್ ಬ್ರಿಗೇಡಿಯರ್ ಜನರಲ್ ಪ್ಯಾಟ್ ರೈಡರ್ ಮಾತನಾಡಿ, ಚೀನಾ ಎವಾಸ್ತವಿಕ ನಿಯಂತ್ರಣ ರೇಖೆಯಾದ್ಯಂತ್ಯ ಸೇನಾ ಮೂಲಸೌಕರ್ಯಗಳನ್ನು ನಿರ್ಮಿಸುವ ಕೆಲಸ ಹಾಗೂ ಸೇನಾ ಪಡೆಗಳನ್ನು ನಿಯೋಜಿಸುವ ಕೆಲಸವನ್ನು ಮುಂದುವರೆಸಿದೆ. ಚೀನಾ ಇಂಡೋ ಪೆಸಿಫಿಕ್ ನಲ್ಲಿನ ನಮ್ಮ ಪಾಲುದಾರರು ಹಾಗೂ ಮಿತ್ರ ರಾಷ್ಟ್ರಗಳ ವಿರುದ್ಧದ ಪ್ರತಿಪಾದನೆಯನ್ನು ಹೆಚ್ಚಿಸುತ್ತಿದೆ ಎಂದು ಹೇಳಿದ್ದಾರೆ