ಇರಾನ್, ಡಿ 16 (DaijiworldNews/HR): 23 ವರ್ಷದ ಮಜಿದ್ರೇಜಾ ರಹ್ನಾವಾರ್ಡ್ ಎಂಬ ಯುವಕ ಇರಾನ್ನಲ್ಲಿ ಹಿಜಾಬ್ ಮತ್ತು ಸರ್ಕಾರಿ ವಿರೋಧಿ ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ಮರಣದಂಡನೆಗೆ ಗುರಿಯಾಗಿದ್ದು, ಆತನ ಕೊನೆಯ ಆಸೆ ಇದೀಗ ಸುದ್ದಿಯಾಗಿದೆ.
"ನನ್ನ ಸಾವಿಗೆ ಯಾರೂ ದುಃಖಿಸಬಾರದು. ನನ್ನ ಸಮಾಧಿ ಬಳಿ ಕುರಾನ್ ಪಠಿಸಬಾರದು. ಆದರೆ ನನ್ನ ಸಾವನ್ನು ವಿಜಯವನ್ನಾಗಿ ಸಂಭ್ರಮಿಸಿ" ಎಂದು ಮಜಿದ್ರೇಜಾ ರಹ್ನಾವಾರ್ಡ್ ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಡಿಸೆಂಬರ್ 8ರಂದು ಇರಾನ್ನಲ್ಲಿ ಅಂತಾರಾಷ್ಟ್ರೀಯ ಪ್ರತಿಭಟನೆಗಳನ್ನು ಲೆಕ್ಕಿಸದೆ 23 ವರ್ಷದ ಮೊಹ್ಸೆನ್ ಶೆಕ್ರಿ ಅವರನ್ನು ಗಲ್ಲಿಗೇರಿಸಲಾಗಿದ್ದು, ಇರಾನ್ನಲ್ಲಿ ಹಿಜಾಬ್ ಮತ್ತು ಸರ್ಕಾರಿ ವಿರೋಧಿ ಪ್ರತಿಭಟನಾಕಾರರಿಗೆ ಮರಣದಂಡನೆ ವಿಧಿಸಿದ ಮೊದಲ ಪ್ರಕರಣ ಇದಾಗಿತ್ತು.
ಇನ್ನು ಇದಾಗಿ ನಾಲ್ಕು ದಿನಗಳ ನಂತರ ಡಿಸೆಂಬರ್ 12ರಂದು 23 ವರ್ಷದ ಮಾಜಿದ್ರೆಜಾ ರಹ್ನವರದ್ ಅವರನ್ನು ಸಾರ್ವಜನಿಕವಾಗಿ ಕ್ರೇನ್ನಲ್ಲಿ ನೇಣು ಹಾಕಲಾಗಿದ್ದು, ಇದೀಗ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.