ಇರಾನ್, ಡಿ 17 (DaijiworldNews/DB): ವ್ಯಕ್ತಿಯೊಬ್ಬ ಕುಬ್ಜ ದೇಹಕ್ಕಾಗಿ ವಿಶ್ವ ದಾಖಲೆ ಬರೆದಿದ್ದಾರೆ. ವಿಶ್ವದ ಅತೀ ಕುಳ್ಳಗಿನ ವ್ಯಕ್ತಿಯೆಂಬ ದಾಖಲೆಯೊಂದಿಗೆ ಈತ ಖ್ಯಾತಿಯಾಗಿದ್ದಾರೆ.
ಅಫ್ಶಿನ್ ಎಸ್ಮೈಲ್ ಘದರ್ಜಾಡೆಹ್ ಎಂಬ ಇರಾನ್ನ 20 ವರ್ಷದ ಯುವಕನೇ ಕುಬ್ಜ ದೇಹಕ್ಕಾಗಿ ವಿಶ್ವ ದಾಖಲೆ ಬರೆದಾತ. 2 ಅಡಿ 1.6 ಇಂಚು ಎತ್ತರವಿರುವ ಈ ವ್ಯಕ್ತಿ ಇಡೀ ಪ್ರಪಂಚದಲ್ಲೇ ಕಡಿಮೆ ಎತ್ತರ ಹೊಂದಿರುವವನಾಗಿದ್ದಾರೆ.
ಇನ್ನು ಅಫ್ಶಿನ್ ಕುಬ್ಜ ವ್ಯಕ್ತಿಯೆಂಬ ದಾಖಲೆಗೆ ಪಾತ್ರನಾಗುವುದರೊಂದಿಗೆ ಕೊಲಂಬಿಯಾ ಮೂಲದ 36 ವರ್ಷದ ಎಡ್ವರ್ಡ್ 'ನಿ ಒ' ಹೆರ್ನಾಂಡೆಜ್ ಎಂಬಾತನ ದಾಖಲೆಯನ್ನು ಮುರಿದಿದ್ದಾರೆ. ಈತ 2.7 ಇಂಚು ಎತ್ತರ ಹೊಂದುವ ಮೂಲಕ ಪ್ರಪಂಚದ ಅತೀ ಕುಬ್ಜ ವ್ಯಕ್ತಿ ದಾಖಲೆಗೆ ಪಾತ್ರನಾಗಿದ್ದ.
ಗಿನ್ನೆಸ್ ವಿಶ್ವ ದಾಖಲೆಗಳಿಂದ ಪರಿಶೀಲಿಸಿದ ನಾಲ್ಕನೇ ಕುಬ್ಜ ವ್ಯಕ್ತಿ ಅಫ್ಶಿನ್ ಆಗಿದ್ದು, ದುಬೈ ಕಚೇರಿಯಲ್ಲಿ ಆತನನ್ನು 24 ಗಂಟೆಗಳ ಅವಧಿಯಲ್ಲಿ ಮೂರು ಬಾರಿ ಅಳತೆ ಮಾಡಲಾಗಿತ್ತು. ನಿಖರ ಎತ್ತರವನ್ನು ದಾಖಲಿಸಿಕೊಳ್ಳಲು ಈ ಪರಿಶೀಲನೆ ನಡೆಯಿತು.