ಬ್ರಿಸ್ಟಲ್, 17 (DaijiworldNews/HR): ಡೈನೋಸಾರ್ ಹೆಸರು ಕೇಳಿದಾಗಲೆಲ್ಲ ನಮಗೆ ಮೊದಲು ನೆನಪಿಗೆ ಬರುವುದು ಉದ್ದನೆಯ ಕುತ್ತಿಗೆ, ದೊಡ್ಡ ಬಾಯಿ ಮತ್ತು ಉದ್ದನೆಯ ಬಾಲವನ್ನು ಹೊಂದಿರುವ ದೈತ್ಯ ಪ್ರಾಣಿ. ಡೈನೋಸಾರ್ ಸಸ್ಯಾಹಾರಿ ಸರೀಸೃಪ (ಪ್ರಾಣಿ) ಎಂದೇ ಜನಜನಿತ. ಆದರೆ ಸಂಶೋಧನೆಯೊಂದರ ಪ್ರಕಾರ ಡೈನೋಸಾರ್ಗಳು ಮಾಂಸ ಭಕ್ಷಕವಾಗಿದ್ದವು ಎಂದು ತಿಳಿದು ಬಂದಿದೆ.
ಚಿತ್ರ(ಎಎನ್ಐ)
ಬ್ರಿಸ್ಟಲ್ ವಿಶ್ವವಿದ್ಯಾನಿಲಯದ ಸಂಶೋಧನೆಯ ಪ್ರಮುಖ ಲೇಖಕರಾದ ಡಾ ಆಂಟೋನಿಯೊ ಬಲ್ಲೆಲ್ ಮೆಯೊರಲ್ ಈ ಕುರಿತು ಮಾಹಿತಿ ನೀಡಿದ್ದು, ಶಾಕಾಹಾರಿ ಡೈನೋಸಾರ್ ವಂಶಾವಳಿಗಳ ಪ್ರಾಚೀನ ಕಾಲದ ಎರಡು ಡೈನೋಸಾರ್ ಗಳು ಪ್ರತ್ಯೇಕವಾಗಿ ಸಸ್ಯಹಾರಿಗಳಾಗಿರಲಿಲ್ಲ ಎಂದರು.
ಇನ್ನು ಬಲ್ಲೆಲ್ ಮತ್ತು ಸಹೋದ್ಯೋಗಿಗಳು 11 ಡೈನೋಸಾರ್ಗಳ ಹಲ್ಲುಗಳನ್ನು ಪರೀಕ್ಷಿಸಿದ್ದು, ಪ್ರಾಣಿಗಳು ಏನು ತಿನ್ನುತ್ತವೆ ಎಂಬುದರ ಕುರಿತು ಹಲ್ಲುಗಳು ಉತ್ತಮ ಸುಳಿವುಗಳನ್ನು ನೀಡುತ್ತವೆ ಎಂದು ತಿಳಿಸಿದರು.
ಅತ್ಯಂತ ಹಳೆಯ ಡೈನೋಸಾರ್ಗಳು ಮಾಂಸಾಹಾರಿಗಳೆಂದು ಸಾಂಪ್ರದಾಯಿಕವಾಗಿ ಭಾವಿಸಲಾಗಿದ್ದರೂ, ಇತ್ತೀಚಿನ ಆವಿಷ್ಕಾರಗಳು ಇದನ್ನು ಪ್ರಶ್ನಿಸಿವೆ ಎಂದು ಬಲ್ಲೆಲ್ ಹೇಳಿದರು.
ಡೈನೋಸಾರ್ಗಳ ಆರಂಭಿಕ ಆಹಾರದ ವೈವಿಧ್ಯತೆಯು ಅವುಗಳ ಏರಿಕೆ ಮತ್ತು ನಂತರದ ಪ್ರಾಬಲ್ಯದಲ್ಲಿ ಮೂಲಭೂತವಾಗಿದೆ, ಬದಲಾಗುತ್ತಿರುವ ಹವಾಮಾನ ಮತ್ತು ಆಹಾರ ಸಂಪನ್ಮೂಲಗಳಿಗೆ ಹೊಂದಿಕೊಳ್ಳಲು ಅನುವು ಮಾಡಿಕೊಡುತ್ತದೆ ಎಂದು ತಿಳಿಸಿದ್ದಾರೆ.