ಇರಾಕ್, ಡಿ 18( DaijiworldNews/MS): ತೈಲ ಸಮೃದ್ಧ ನಗರವಾದ ಕಿರ್ಕುಕ್ನ ನೈಋತ್ಯ ಭಾಗದಲ್ಲಿ ಬೆಂಗಾವಲು ಪಡೆಯ ವಾಹನದ ಮೇಲೆ ಬಾಂಬ್ ದಾಳಿ ನಡೆದಿದ್ದು, ಕನಿಷ್ಠ ಎಂಟು ಇರಾಕಿ ಫೆಡರಲ್ ಪೊಲೀಸರು ಸಾವನ್ನಪ್ಪಿದ್ದಾರೆ ಎಂದು ಭದ್ರತಾ ಮೂಲಗಳು ತಿಳಿಸಿವೆ.
ಕಿರ್ಕುಕ್ನ ನೈಋತ್ಯಕ್ಕೆ 30 ಕಿ.ಮೀ ದೂರದಲ್ಲಿರುವ ಸಫ್ರಾ ಗ್ರಾಮದ ಬಳಿ ಸ್ಫೋಟ ಸಂಭವಿಸಿದೆ ಎಂದು ಮೂಲಗಳು ತಿಳಿಸಿದ್ದು, ಘಟನೆಯಲ್ಲಿ ಇಬ್ಬರು ಪೊಲೀಸರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಘಟನೆ ಬಗ್ಗೆ ಯಾವುದೇ ಸಂಘಟನೆ ಹೊಣೆಗಾರಿಕೆಯ ಬಗ್ಗೆ ತಕ್ಷಣ ಹೇಳದಿದ್ದರೂ, ಇಸ್ಲಾಮಿಕ್ ಉಗ್ರಗಾಮಿ ಸಂಘಟನೆ ’ಡಾಯಿಸ್ ’ (Daesh) ಈ ಭಾಗದಲ್ಲಿ ಸಕ್ರಿಯವಾಗಿದೆ. ಡಿಸೆಂಬರ್ 2017 ರಲ್ಲಿ ಇರಾಕ್ ದೇಶದ ದೊಡ್ಡ ಭಾಗವನ್ನು ವಶಪಡಿಸಿಕೊಂಡಿದ್ದ ಸಂಘಟನೆಯ ವಿರುದ್ದ ವಿಜಯವನ್ನು ಘೋಷಿಸಿತ್ತು.