ಥಾಯ್ಲೆಂಡ್, ಡಿ 19 (DaijiworldNews/DB):100ಕ್ಕೂ ಅಧಿಕ ಥಾಯ್ ನೌಕಾಪಡೆಯ ನಾವಿಕರನ್ನು ಹೊತ್ತು ಪ್ರಯಾಣಿಸುತ್ತಿದ್ದ ಹಡಗೊಂದು ಥಾಯ್ಲೆಂಡ್ನಲ್ಲಿ ಮುಳುಗಿದ ಘಟನೆ ನಡೆದಿದೆ. ಇದೀಗ ನಾವಿಕರ ರಕ್ಷಣಾ ಕಾರ್ಯಾಚರಣೆ ಭರದಿಂದ ನಡೆಯುತ್ತಿದ್ದು, ಈಗಾಗಲೇ 75 ನಾವಿಕರನ್ನು ರಕ್ಷಿಸಲಾಗಿದೆ.
ಪ್ರಚುವಾಪ್ ಖಿರಿ ಖಾನ್ ಪ್ರಾಂತ್ಯದ ಬಂಗ್ಸಫನ್ ಜಿಲ್ಲೆಯ ಪಿಯರ್ನಿಂದ 32 ಕಿಲೋಮೀಟರ್ (20 ಮೈಲುಗಳು) ಸಮುದ್ರದಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಸೋಮವಾರ ರಾಯಲ್ ಥಾಯ್ ನೌಕಾಪಡೆಯ ಮೂರು ಯುದ್ಧನೌಕೆಗಳು ಮತ್ತು ಎರಡು ಹೆಲಿಕಾಪ್ಟರ್ ಮೂಲಕ ತುರ್ತು ರಕ್ಷಣಾ ಕಾರ್ಯಾಚರಣೆ ನಡೆದಿದೆ.
ಸದ್ಯ 75 ನಾವಿಕರನ್ನು ರಕ್ಷಿಸಲಾಗಿದ್ದು, ಇನ್ನೂ 31 ಮಂದಿ ನೀರಿನಲ್ಲಿ ಸಿಲುಕಿಕೊಂಡಿದ್ದಾರೆ. ಬಲವಾದ ಗಾಳಿಯಿಂದಾಗಿ ಹಡಗು ಮುಳುಗಿ ವಿದ್ಯುತ್ ವ್ಯವಸ್ಥೆಯನ್ನೂ ಕಡಿತಗೊಳಿಸಿದೆ. ಗಾಳಿಯಿಂದಾಗಿ ರಕ್ಷಣಾ ಕಾರ್ಯಾಚರಣೆಗೂ ಅಡ್ಡಿಯಾಗುತ್ತಿದೆ ಎಂದು ತಿಳಿದು ಬಂದಿದೆ.