ಸ್ಯಾನ್ ಫ್ರಾನಿಸ್ಕೋ, ಡಿ 21 ( DaijiworldNews/MS): ಟ್ವಿಟರ್ ಮುಖ್ಯಸ್ಥ ಎಲೆನ್ ಮಸ್ಕ್ ಶೀಘ್ರದಲ್ಲೇ ಮುಖ್ಯ ಕಾರ್ಯನಿರ್ವಾಹಕ ಹುದ್ದೆಗೆ ಶೀಘ್ರದಲ್ಲೇ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.
"ಟ್ವಿಟರ್ ನ ಕೆಲಸವನ್ನು ಮಾಡಬಲ್ಲ ಯಾರಾದರೂ ಮೂರ್ಖ ಸಿಕ್ಕಿದ ಕೂಡಲೇ ರಾಜೀನಾಮೆ ನೀಡುತ್ತೇನೆ.ನಂತರ, ನಾನು ಸಾಫ್ಟ್ವೇರ್ ಮತ್ತು ಸರ್ವರ್ಗಳ ತಂಡಗಳನ್ನು ಮುನ್ನಡೆಸುತ್ತೇನೆ" ಎಂದು ಟ್ವೀಟ್ ಮಾಡಿದ್ದಾರೆ.
ಟ್ವಿಟರ್ ಸಿಇಓ ಹುದ್ದೆ ವಹಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಮಸ್ಕ್ ಅವರು ಪದತ್ಯಾಗದ ಸುಳಿವು ನೀಡಿದ್ದಾರೆ. ಎಲಾನ್ ಮಸ್ಕ್ ಅವರು ತಾವು ಸಿಇಓ ಹುದ್ದೆಯಿಂದ ಕೆಳಗೆ ಇಳಿಯಬೇಕೆ ಬೇಡವೇ ಎಂಬ ಬಗ್ಗೆ ಭಾನುವಾರ ಸಂಜೆ ಟ್ವಿಟರ್ ನಲ್ಲಿ ಸಮೀಕ್ಷೆ ಮಾಡಿದ್ದರು. ಅದರಲ್ಲಿ 57.5 ಶೇಕಡ ಮಂದಿ ರಾಜೀನಾಮೆ ಕೊಡಬೇಕು ಎನ್ನುವುದಕ್ಕೆ ಮತ ಹಾಕಿದ್ದರು.
ಟ್ವಿಟ್ಟರ್ ಅನ್ನು ಸ್ವಾಧೀನಪಡಿಸಿಕೊಂಡ ನಂತರ, ಮಸ್ಕ್ ಅವರು ಟೆಸ್ಲಾ ಮತ್ತು ಟ್ವಿಟರ್ ಎರಡರ ಸಿಇಒ ಆಗಿ ಕೆಲಸ ಮಾಡುತ್ತಿದ್ದಾರೆ.