ಮಾಸ್ಕೋ, ಡಿ 23 ( DaijiworldNews/MS): ಉಕ್ರೇನ್ ಜೊತೆಗಿನ ಯುದ್ಧವನ್ನು ಅದಷ್ಟು ಬೇಗ ಕೊನೆಗೊಳಿಸಲು ರಷ್ಯಾ ಬಯಸುತ್ತದೆ ಎಂದು ಅಧ್ಯಕ್ಷ ಪುಟಿನ್ ಹೇಳಿದ್ದಾರೆ.
ಯುಎಸ್ ಅಧ್ಯಕ್ಷ ಬಿಡೆನ್ ಅವರೊಂದಿಗೆ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರ ಭೇಟಿಯ ಕುರಿತು ಮಾತನಾಡಿ, " ರಷ್ಯಾ ಸರಿಯಾದ ಮಾತುಕತೆಯೊಂದಿಗೆ ಯುದ್ಧವನ್ನು ಕೊನೆಗೊಳಿಸಲು ಬಯಸಿದೆ. ಮಿಲಿಟರಿ ಸಂಘರ್ಷವನ್ನು ಮುಂದುವರಿಸಲು ಬಯಸಲಿಲ್ಲ. ಮಾತುಕತೆಯ ಮೂಲಕ ಯುದ್ಧವನ್ನು ಶೀಘ್ರದಲ್ಲೇ ಕೊನೆಗೊಳಿಸಲಾಗುವುದು" ಎಂದು ಅವರು ಭರವಸೆ ನೀಡಿದ್ದಾರೆ.
ಉಕ್ರೇನ್ ನಲ್ಲಿನ ಸಂಘರ್ಷದ ತ್ವರಿತ ಅಂತ್ಯವು ಅನಿವಾರ್ಯವಾಗಿ ರಾಜತಾಂತ್ರಿಕ ಪರಿಹಾರವನ್ನು ಒಳಗೊಂಡಿರುತ್ತದೆ. ಮಾತುಕತೆಗೆ ಮುಕ್ತವಾಗಿದೆ ಎಂದು ರಷ್ಯಾ ನಿರಂತರವಾಗಿ ಹೇಳಿದೆ ಎಂದು ಪುಟಿನ್ ಹೇಳಿದ್ದಾರೆ .