ಬ್ರೆಜಿಲ್, ಡಿ 25 ( DaijiworldNews/MS):"ದಪ್ಪಗಿದ್ದೀರಾ, ನಿಮಗೆ ವಿಮಾನದ ಸೀಟುಗಳಲ್ಲಿ ಹೊಂದಿಕೊಳ್ಳಲು ಸಾಧ್ಯವಿಲ್ಲ " ಎಂದು ಪ್ರಯಾಣಕ್ಕೆ ತಡೆಯೊಡ್ಡಿದ ಪ್ಲಸ್-ಸೈಜ್ ಮಾಡೆಲ್ ಗೆ ಕಿರುಕುಳ ನೀಡಿದ ಖತಾರ್ ಏರ್ವೇಸ್ ವಿರುದ್ದ ಬ್ರೆಜಿಲ್ನ ನ್ಯಾಯಾಲಯ ತೀರ್ಪು ನೀಡಿದೆ.
38 ವರ್ಷ ವಯಸ್ಸಿನ ಪ್ಲಸ್-ಸೈಜ್ ಮಾಡೆಲ್ನ ಮಾನಸಿಕ ಕಿರುಕುಳ ನೀಡಿದಕ್ಕಾಗಿ ಆಕೆಯ ಮಾನಸಿಕ ಚಿಕಿತ್ಸೆಯ ವೆಚ್ಚ 3 ಲಕ್ಷ ರೂ.ವನ್ನು ಖತಾರ್ ಏರ್ವೇಸ್ ಗೆ ಪಾವತಿಸುವಂತೆ ಆದೇಶಿಸಿದೆ.
ಜೂಲಿಯಾನಾ ನೆಹ್ಮೆ ಎಂಬ ಬ್ರೆಜಿಲ್ ಪ್ಲಸ್-ಸೈಜ್ ಮಾಡೆಲ್ ಇಡೀ ಘಟನೆ ಬಗ್ಗೆ ಸಾಮಾಜಿಕ ತಾಲತಾಣದಲ್ಲಿ ಅಸಮಾಧಾನ ಹೊರಹಾಕಿದ್ದಾರೆ. ನವೆಂಬರ್ 22ರಂದು ದೋಹಾಗೆ ತೆರಳಲು ವಿಮಾನದ ಟಿಕೆಟ್ ಬುಕ್ ಮಾಡಿದ್ದರು. ಪ್ರಯಾಣ ದಿನ ತಾನು ಬುಕ್ ಮಾಡಿದ್ದ ಎಕಾನಮಿ ಕ್ಲಾಸ್ ಟಿಕೆಟ್ನಲ್ಲಿ ಕಾದಿರಿಸಿದ ಸೀಟ್ಗೆ ತೆರಳಬೇಕು ಎನ್ನುವಷ್ಟರಲ್ಲಿ ಖತಾರ್ ಏರ್ವೇಸ್ನ ಸಿಬ್ಬಂದಿ ತಡೆದುನೀವು ತುಂಬಾ ದಪ್ಪಗಿದ್ದೀರಾ. ಹೀಗಾಗಿ ನಿಮಗೆ ಎಕಾನಮಿ ಕ್ಲಾಸ್ನ ಸೀಟುಗಳಲ್ಲಿ ಹೊಂದಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ. ಬಿಸಿನೆಸ್ ಕ್ಲಾಸ್ ಟಿಕೆಟ್ ಖರೀದಿಸಿದರೆ ಮಾತ್ರ ವಿಮಾನದಲ್ಲಿ ತೆರಳಬಹುದು ಎಂದು ಸಿಬ್ಬಂದಿ ಹೇಳಿದರು. ಇದಕ್ಕಾಗಿ ಹೆಚ್ಚುವರಿ $1000 (8000 ರೂ.) ಪಾವತಿಸಿ ಟಿಕೆಟ್ ವರ್ಗಾಯಿಸಿಕೊಳ್ಳಬೇಕಾಗಿತ್ತು .ವಿಮಾನ ನಿಲ್ದಾಣದಲ್ಲಿ ನಡೆದ ಈ ಘಟನೆಯಿಂದ ನನಗೆ ದೋಹಾ ತಲುಪಲು ಸಾಧ್ಯವಾಗಿಲ್ಲ.ಅಲ್ಲದೆ ಖತಾರ್ ಏರ್ವೇಸ್ ಸಂಸ್ಥೆ ಟಿಕೆಟ್ನ ಮೊತ್ತವನ್ನೂ ಹಿಂತಿರುಗಿಸಿಲ್ಲ ಎಂದು ಬರೆದುಕೊಂಡಿದ್ದಾರೆ
ತೂಕ ಹೆಚ್ಚಿರುವ ಕಾರಣದಿಂದ ವಿಮಾನ ಪ್ರಯಾಣಕ್ಕೆ ಅವಕಾಶ ನೀಡದೇ ಇರುವುದರಿಂದ ನನಗೆ ಮಾನಸಿಕವಾಗಿ ಆಘಾತ ಉಂಟಾಗಿದೆ. ಅತೀ ದೊಡ್ಡ ವಿಮಾನಯಾನ ಸಂಸ್ಥೆಯೊಂದು ತೂಕದ ಕಾರಣ ನೀಡಿ ಅವಮಾನಿಸಿದೆ ಎಂದು ಹೇಳಿಕೊಂಡಿದ್ದಾರೆ. ಈ ವಿಚಾರವಾಗಿ ಜೂಲಿಯಾನ ನೆಹ್ಮೆ ಕೋರ್ಟ್ ಮೆಟ್ಟಿಲೇರಿದ್ದಾರೆ. ಇದೀಗ ಈ ಪ್ರಕರಣವನ್ನು ಪರಿಶೀಲಿಸಿದ ಕೋರ್ಟ್ ನೆಹ್ಮಾಗೆ ಮಾನಸಿಕ ಚಿಕಿತ್ಸೆಯ ವೆಚ್ಚ 3 ಲಕ್ಷ ರೂ. ಮೊತ್ತವನ್ನು ಖತಾರ್ ಏರ್ವೇಸ್ ಸಂಸ್ಥೆ ಭರಿಸಬೇಕು ಎಂದು ಆದೇಶ ಹೊರಡಿಸಿದೆ ಎಂದು ವರದಿಯಾಗಿದೆ.