ಇಸ್ಲಾಮಬಾದ್,ಮಾ 07 (MSP): ಭಯೋತ್ಪಾದಕ ಮಸೂದ್ ಅಝರ್ ಸತ್ತಿದ್ದಾನೆ, ಬದುಕಿದ್ದಾನೆ, ಆಸ್ಪತೆಯಲ್ಲಿದ್ದಾನೆ ಎನ್ನುವ ಪಾಕಿಸ್ತಾನದ ವದಂತಿ ಹೇಳಿಕೆಯ ನಡುವೆ " ನನಗೇನು ಆಗಿಲ್ಲ ನಾನು ಇನ್ನೂ ಬದುಕಿದ್ದೇನೆ, ಚೆನ್ನಾಗಿದ್ದೇನೆ, ಕಾಶ್ಮೀರಿಗಳನ್ನು ಭಾರತದವರು ದಮನ ಮಾಡುತ್ತಿದ್ದಾರೆ ಹೀಗಾಗಿ ಭಾರತೀಯರ ವಿರುದ್ಧ ಜಿಹಾದ್ ಆರಂಭಿಸಬೇಕೆಂದು " ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್ ತನ್ನ ಹಿಂಬಾಲಕರಿಗೆ ಕರೆ ನೀಡಿದ್ದಾನೆ.
ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆ ಮಸೂದ್ ಅಜರ್ ಸುಮಾರು 11.41 ನಿಮಿಷದ ಆಡಿಯೋ ಬಿಡುಗಡೆಗೊಂಡಿದ್ದು, ಇದರಲ್ಲಿ ನಾನು ಮೃತಪಟ್ಟಿದ್ದೇನೆಂದು ಮಾಧ್ಯಮದಲ್ಲಿ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಕಾಶ್ಮೀರಿಗಳನ್ನು ಹತ್ತಿಕ್ಕಲು ನನ್ನ ಬೆಂಬಲಿಗರನ್ನು ಅಣಿಗೊಳಿಸುತ್ತಿದ್ದೇನೆ ಎಂದು ಅಡಿಯೋದಲ್ಲಿ ಹೇಳಿದ್ದಾನೆ.
ಇನ್ನು ಪಾಕಿಸ್ತಾನ ಸರ್ಕಾರದ ವಿರುದ್ದ ಮಸೂದ್ ಅಜರ್ ಕಿಡಿಕಾರಿದ್ದು ರಾಷ್ಟ್ರೀಯ ಕ್ರಿಯಾ ಯೋಜನೆಯಡಿ ಪಾಕ್ ಸರ್ಕಾರ ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆ ವಿರುದ್ಧ ಶಿಸ್ತುಕ್ರಮ ಮುಂದಾಗಿರುವುದನ್ನು ವಿರೋಧಿಸಿದ್ದಾನೆ. ಜತೆಗೆ ಪಾಕ್ ವಿದೇಶಾಂಗ ಸಚಿವ ಶಾಹ್ ಮಹ್ಮೂದ್ ಖುರೇಷಿಯನ್ನು ತರಾಟೆ ತೆಗೆದುಕೊಂಡಿದ್ದಾನೆ.