ಟೋಕಿಯೊ (ಎಪಿ), ಡಿ 26 (DaijiworldNews/DB): ಭಾರೀ ಹಿಮಪಾತದಿಂದಾಗಿ ಜಪಾನ್ನಲ್ಲಿ 17 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 90ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಸೋಮವಾರ ಈ ಕುರಿತು ಮಾಹಿತಿ ನೀಡಿದ ಅಲ್ಲಿನ ವಿಪತ್ತು ನಿರ್ವಹಣಾ ಅಧಿಕಾರಿಗಳು, ಹಿಮದಿಂದಾಗಿ 17 ಮಂದಿ ಜೀವ ಕಳೆದುಕೊಂಡಿದ್ದಾರೆ. ಹಲವು ಮನೆಗಳ ವಿದ್ಯುತ್ ಸಂಪರ್ಕವೂ ಕಳೆದುಕೊಂಡಿದೆ ಎಂದರು.
ಕಳೆದ ವಾರ ಜಪಾನ್ನ ಉತ್ತರ ಭಾಗದಲ್ಲಿ ಹಿಮಪಾತವಾಗಿ 11 ಮಂದಿ ಮೃತಪಟ್ಟಿದ್ದರು. ಅಲ್ಲದೆ ಮನೆ ಮೇಲೆ ಬಿದ್ದ ಹಿಮ ಸ್ವಚ್ಚಗೊಳಿಸುವ ವೇಳೆ ಜಾರಿ ಬಿದ್ದು ಹಲವರು ಸಾವನ್ನಪ್ಪಿದ್ದಾರೆ. ನಾಗೈ ನಗರದಲ್ಲಿ ಮೇಲ್ಚಾವಣಿಯಲ್ಲಿದ್ದ ಹಿಮ ಕುಸಿದು ಬಿದ್ದು 70 ವರ್ಷದ ವೃದ್ದೆ ಸಾವಿಗೀಡಾಗಿದ್ದಾರೆ.
ಭಾರೀ ಹಿಮದಿಂದಾಗಿ ವಾಹನ ಸಂಚಾರಕ್ಕೂ ತೊಡಕಾಗಿದ್ದು, ರೈಲು, ವಿಮಾನ ಸಂಚಾರಗಳನ್ನು ಮೊಟಕುಗೊಳಿಸಲಾಗಿದೆ ಎಂದು ಸಾರಿಗೆ ಸಚಿವಾಲಯ ತಿಳಿಸಿದೆ.