ಕ್ರೈಮಿಯಾ,ಡಿ 31 ( DaijiworldNews/MS): ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಭಾರತೀಯ ವೈದ್ಯಕೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ ಘಟನೆ ಕ್ರೈಮಿಯಾದ ಸಿಮ್ಫೆರೋಪೋಲ್ನಲ್ಲಿ ನಡೆದಿದೆ.
ಕ್ರೈಮಿಯಾ ಗಣರಾಜ್ಯದ ಆಂತರಿಕ ವ್ಯವಹಾರಗಳ ಸಚಿವಾಲಯದ ಪ್ರಕಾರ, ಪೊಲೀಸರ ತನಿಖೆಯಲ್ಲಿ ಕಂಡುಬಂದಂತೆ, ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ. ಕಾರಿನಲ್ಲಿ ಮೂರು ಮತ್ತು ನಾಲ್ಕನೇ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದರು.
ಸೆರ್ಗೆವ್-ತ್ಸೆನ್ಸ್ಕಿ ಸ್ಟ್ರೀಟ್ನಿಂದ ಕ್ರೈಮಿಯಾದ ಸೇಂಟ್ ಸಿಮ್ಫೆರೊಪೋಲ್ ಕಡೆಗೆ ಪ್ರಯಾಣಿಸುತ್ತಿದ್ದ ಕಾರು ನಿಯಂತ್ರಣ ಕಳೆದುಕೊಂಡು ಮರಕ್ಕೆ ಢಿಕ್ಕಿ ಹೊಡೆದಿದೆ.