ನ್ಯೂಯಾರ್ಕ್, ಡಿ 31 ( DaijiworldNews/MS): ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಿ, ವಿಚಿತ್ರ ನಿಯಮಗಳಿಂದ ಸುದ್ದಿಯಾಗುತ್ತಿರುವ ಟ್ವಿಟರ್ ಸಂಸ್ಥೆಯ, ಉದ್ಯೋಗಿಗಳು ಸ್ವಂತ ತಮ್ಮದೇ ಆದ ಟಾಯ್ಲೆಟ್ ಪೇಪರ್ ಅನ್ನು ಕಚೇರಿಗೆ ತರುತ್ತಿದ್ದಾರಂತೆ.!
ಹೌದು ಹಣ ಉಳಿಸಲೆಂದು ಬಿಲಿಯನೇರ್ ಸಂಸ್ಥೆ ಟ್ವಿಟರ್ನ ನ್ಯೂಯಾರ್ಕ್ ಕಚೇರಿಗಳಲ್ಲಿನ ಹೌಸ್ಕೀಪಿಂಗ್ ಸಿಬ್ಬಂದಿ ಹಾಗೂ ಸ್ವಚ್ಛತಾಕರ್ಮಿಗಳನ್ನೂ ಕೆಲಸದಿಂದ ವಜಾಗೊಳಿಸಿದೆ. ಇದಲ್ಲದೇ ಈ ತಿಂಗಳ ಆರಂಭದಲ್ಲಿ ಕಚೇರಿಯಲ್ಲಿನ ಉದ್ಯೋಗಿಗಳು ಸಂಸ್ಥೆಯ ಅವ್ಯವಸ್ಥೆ ವಿರುದ್ದ ಮುಷ್ಕರ ಮಾಡಿದ್ದಕ್ಕಾಗಿ ಸ್ಯಾನ್ ಫ್ರಾನ್ಸಿಸ್ಕೋ ಪ್ರಧಾನ ಕಚೇರಿಯಲ್ಲಿ ಹೌಸ್ಕೀಪಿಂಗ್ ಸಿಬ್ಬಂದಿ ಹಾಗೂ ಸ್ವಚ್ಛತಾಕರ್ಮಿಗಳನ್ನೂ ಕೆಲಸದಿಂದ ಕಿತ್ತು ಹಾಕಲಾಗಿತ್ತು!
ಇನ್ನು ನಾಲ್ಕು ಮಹಡಿಗಳಲ್ಲಿ ಕಾರ್ಯಾಚರಿಸುತ್ತಿದ್ದ ಸಂಸ್ಥೆಯ ಎಲ್ಲಾ ಸಿಬ್ಬಂದಿಯನ್ನು ಎರಡು ಮಹಡಿಗಳಿಗೆ ಸ್ಥಳಾಂತರಿಸಿದೆ.ಹೀಗಾಗಿ ಸೀಮಿತ ಸ್ಥಳಗಳಲ್ಲಿ ಹೆಚ್ಚು ಜನರು ತುಂಬಿರುವುದರಿಂದ, ಕಛೇರಿ ವಾಸನೆ ಹೊಡೆಯುತ್ತಿದೆ. ಬಾತ್ರೂಮ್ಗಳಲ್ಲಿ ಕೊಳಕು ತುಂಬಿದ್ದು ಕೆಲವು ಕೆಲಸಗಾರರು ತಮ್ಮ ಸ್ವಂತ ಟಾಯ್ಲೆಟ್ ಪೇಪರ್ಗಳನ್ನು ಮನೆಯಿಂದ ತರಲು ಶುರುಮಾಡಿದ್ದಾರೆ.
ಈ ಪ್ರಕರಣ ನಿಜವೇ ಎಂದು ಟ್ವಿಟರ್ನಲ್ಲಿ ಪ್ರಶ್ನಿಸಿದ್ದಾಗ, ಎಲಾನ್ ಮಸ್ಕ್ ಅದನ್ನು ಖಚಿತಪಡಿಸಿದ್ದಾರೆ. ತಮ್ಮ ಟ್ವೀಟ್ನಲ್ಲಿ 'BYOTP! LOL, ಅರ್ಧ ದಿನ ಈ ಪರಿಸ್ಥಿತಿ ನಿಜವಾಗಿತ್ತು' ಎಂದಿದ್ದಾರೆ.