ಕ್ಯಾಲಿಫೋರ್ನಿಯಾ, ಜ 05 (DaijiworldNews/DB): ಪ್ರಿನ್ಸ್ ಹ್ಯಾರಿಯ ಆತ್ಮಚರಿತ್ರೆ 'ಸ್ಪೇರ್ ಬಿಡುಗಡೆಗೆ ಸಿದ್ದವಾಗಿದ್ದು, ಜನವರಿ 10ರಂದು ಲೋಕಾರ್ಪಣೆಗೊಳ್ಳಲಿದೆ. ವಿಶೇಷವೆಂದರೆ ಸಹೋದರ ವಿಲಿಯಂ ತನ್ನ ಮೇಲೆ ದೈಹಿಕ ಹಲ್ಲೆ ನಡೆಸಿದ್ದರು ಎಂಬ ಆಘಾತಕಾರಿ ಮಾಹಿತಿಯೊಂದನ್ನು ಪ್ರಿನ್ಸ್ ಹ್ಯಾರಿ ತಮ್ಮ ಆತ್ಮಕತೆಯಲ್ಲಿ ಹೇಳಿಕೊಂಡಿದ್ದಾರೆ.
ಮಾಜಿ ಪತ್ನಿ, ಅಮೇರಿಕನ್ ನಟಿ ಮೇಘನ್ ಮಾರ್ಕೆಲ್ ಬಗ್ಗೆ ಚರ್ಚಿಸುವ ಸಮಯದಲ್ಲಿ ಈಗಿನ ವೇಲ್ಸ್ ರಾಜಕುಮಾರ, ಸಹೋದರ ವಿಲಿಯಂ ನನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದರು ಎಂದು ಆತ್ಮಚರಿತ್ರೆಯ ಆರನೇ ಪುಟದಲ್ಲಿ ಪ್ರಿನ್ಸ್ ಹ್ಯಾರಿ ಉಲ್ಲೇಖ ಮಾಡಿದ್ದಾರೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ವಿಲಿಯಂ ಮೇಘನ್ ಅವರನ್ನು ಕೆಟ್ಟವಳು, ಅಸಭ್ಯ ಮುಂತಾದ ಪದಗಳನ್ನು ಸಂಬೋಧಿಸಿ ಜರೆದಿದ್ದರು. ಅಲ್ಲದೆ ನನ್ನನ್ನು ಕಾಲರ್ನಿಂದ ಹಿಡಿದೆಳೆದು ಕುತ್ತಿಗೆಯಿಂದ ನೆಕ್ಲೆಸ್ ಕಿತ್ತು ನೆಲಕ್ಕೆಸೆದಿದ್ದರು. ನನ್ನನ್ನು ಮಹಡಿಯಿಂದಾಚೆ ತಳ್ಳಿದ ಪರಿಣಾಮ ನಾನು ನಾಯಿಯ ಬಟ್ಟಲಿನ ಮೇಲೆ ಬಿದ್ದಿದ್ದೆ. ಇದರಿಂದ ನನ್ನ ಬೆನ್ನಿನ ಭಾಗದಲ್ಲಿ ಗಾಯಗಳಾಗಿತ್ತು. ಈ ವೇಳೆ ಗಲಾಟೆ ಮತ್ತಷ್ಟು ಹೆಚ್ಚಾಗಿತ್ತು ಎಂದು ಬರೆದುಕೊಂಡಿದ್ದಾರೆ ಎನ್ನಲಾಗಿದೆ. ನಾನು ನೋವಿನಿಂದ ಅಲ್ಲಿಯೇ ಮಲಗಿಕೊಂಡೆ. ಬಳಿಕ ನನ್ನ ಹತ್ತಿರ ಬಂದು ಹೊರ ಹೋಗು ಎಂದು ಬೆದರಿಸಿದರು. ಇನ್ನು ಈ ಗಲಾಟೆಯು ನನ್ನ ಶಾಶ್ವತ ಬೆನ್ನುನೋವಿಗೆ ಕಾರಣವಾಯಿತು ಎಂದೂ ಉಲ್ಲೇಖಿಸಿದ್ದಾರೆ.
96ನೇ ವಯಸ್ಸಿನಲ್ಲಿ ತಮ್ಮ ತಾಯಿ ರಾಣಿ ಎಲಿಜಬೆತ್ ಮರಣಾನಂತರ ತಂದೆ ಕಿಂಗ್ ಚಾರ್ಲ್ಸ್ ತಮ್ಮ ಪಟ್ಟಾಭಿಷೇಕಕ್ಕೆ ತಯಾರಿ ನಡೆಸುತ್ತಿದ್ದ ವೇಳೆ ಸಹೋದರರ ನಡುವಿನ ಪ್ರಕ್ಷುಬ್ದ ಸ್ಥಿತಿಯು ಮತ್ತೊಮ್ಮೆ ಪ್ರವರ್ಧಮಾನಕ್ಕೆ ಬಂದಿದೆ ಎಂದೂ ಬರೆದಿದ್ದಾರೆ.
2020ರಲ್ಲಿ ಹ್ಯಾರಿ ಮತ್ತು ಮಾರ್ಕೆಲ್ ತಮ್ಮ ರಾಜಮನೆತನವನ್ನು ತೊರೆದು ಕ್ಯಾಲಿಫೋರ್ನಿಯಾಗೆ ತೆರಳಿದ ನಂತರ ಒಡಹುಟ್ಟಿದವರು ಈ ಪ್ರಕ್ಷುಬ್ದ ಸಂಬಂಧ ಆರಂಭಗೊಂಡಿದೆ ಎಂದೂ ಆತ್ಮಚರಿತ್ರಯಲ್ಲಿ ದಾಖಲಾಗಿದೆ.
2020ರಲ್ಲಿ ತಾವು ರಾಜಮನೆತನ ತೊರೆಯಲು ಕಾರಣ ಮತ್ತು ಬ್ರಿಟಿಷ್ ರಾಜಮನೆತನದೊಂದಿಗಿನ ತಮ್ಮ ಅನುಭವಗಳ ಬಗ್ಗೆ ನೆಟ್ಫ್ಲಿಕ್ಸ್ ಡಾಕ್ಯುಸರೀಸ್ನಲ್ಲಿಯೂ ಹ್ಯಾರಿ ಮತ್ತು ಮೇಘನ್ ಹೇಳಿಕೊಂಡಿದ್ದಾರೆ. ಇನ್ನು ಕೆಲವು ಮಾಧ್ಯಮಗಳು ಹಾಗೂ ಟ್ಯಾಬ್ಲಾಯ್ಡ್ಗಳ ವರದಿಗಳು ಕುಟುಂಬದಲ್ಲಿ ಮತ್ತಷ್ಟು ಒಡಕು ಮೂಡಿಸಲು ಕಾರಣವಾಗಿರುವ ಬಗ್ಗೆಯೂ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.