ಅಮೇರಿಕಾ, ಜ 08 ( DaijiworldNews/MS): ಅವಳಿ ಮಕ್ಕಳು ಸಾಮಾನ್ಯವಾಗಿ ಕೆಲವು ನಿಮಿಷಗಳ ಅಂತರದಲ್ಲಿ ಜನಿಸುತ್ತಾರೆ. ಅದರಂತೆ ಈ ಅವಳಿಗಳು ಕೂಡ ಕೇವಲ ೬ ನಿಮಿಷದ ಅಂತರದಲ್ಲಿ ಜನಿಸಿದ್ದಾರೆ.
ವಿಶೇಷ ಎಂದರೆ ಅವಳಿ ಮಕ್ಕಳು 2022, ಡಿಸೆಂಬರ್ 31ರ ರಾತ್ರಿ 11.55ಕ್ಕೆ ಜನಿಸಿದರೆ, ಮತ್ತೊಂದು ಮಗು ಜನವರಿ 1, 2023 ರಂದು 12:01 ಕ್ಕೆ ರಾತ್ರಿ 12 ಗಂಟೆಗೆ ಜನಿಸಿದೆ. ಈ ಮೂಲಕ ಎರಡು ಮಕ್ಕಳು ಬೇರೆ ಬೇರೆ ವರ್ಷದಲ್ಲಿ ಜನಿಸಿ ಅಚ್ಚರಿ ಮೂಡಿಸಿವೆ.
ಅಮೇರಿಕಾದ ದಂಪತಿಗಳು ಅವಳಿ ಹೆಣ್ಣುಮಕ್ಕಳು, 2022 ಮತ್ತು 2023 ರಲ್ಲಿ ಯುಎಸ್ ನಲ್ಲಿ ಜನ್ಮದಿನಾಂಕ ಪಡೆದಿದ್ದಾರೆ. ತನ್ನ ಮೊದಲ ಮಗಳು ಅನ್ನಿ ಜೋ ಹಾಗೂ ಎರಡನೇ ಮಗಳು ಎಫಿ ರೋಸ್ ಎಂದು ನಾಮಕರಣ ಮಾಡಿದ್ದಾರೆ.
ಮಕ್ಕಳ ತಾಯಿ ಕಾಲಿ ಅವರು , ಅವರು ತಮ್ಮ ಇಬ್ಬರು ಮಕ್ಕಳು ವಿಶಿಷ್ಟ ಜನ್ಮದಿನಗಳನ್ನು ಹೊಂದಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ. ಈ ರೀತಿ ಇಬ್ಬರು ಬೇರೆ ಬೇರೆ ವರ್ಷಗಳಲ್ಲಿ ಜನಿಸುತ್ತಿರುವುದು ಅಚ್ಚರಿ ಮೂಡಿಸಿದೆ ಎಂದಿದ್ದಾರೆ.