ಇಂಗ್ಲೆಂಡ್, ಜ 10 ( DaijiworldNews/MS): ಪರಿಸರಕ್ಕೆ ಹಾನಿ ಮಾಡುವ ಪ್ಲಾಸ್ಟಿಕ್ ತ್ಯಾಜ್ಯಗಳು ಹಾಗೂ ಹಸಿರು ಮನೆ ಅನಿಲಗಳನ್ನು, ಇಂಧನ ಮತ್ತು ಇತರ ಉತ್ಪನ್ನಗಳಾಗಿ ಪರಿವರ್ತಿಸುವ ಸೌರ ಶಕ್ತಿ ಚಾಲಿತ ವ್ಯವಸ್ಥೆಯನ್ನು ಕೆಂಬ್ರಿಡ್ಗ್ ವಿಶ್ವವಿದ್ಯಾಲಯದ ಟೀಂ ಅಭಿವೃದ್ದಿಪಡಿಸಿದೆ. ಈ ಎರಡು ತ್ಯಾಜಗಳನ್ನು ಏಕಕಾಲದಲ್ಲಿ ಎರಡು ರಾಸಾಯನಿಕ ಉತ್ಪನ್ನಗಳನ್ನಾಗಿ ಪರಿವರ್ತನೆ ಮಾಡಬಹುದು ಎಂದು ಕೆಂಬ್ರಿಡ್ಜ್ ತಂಡ ಹೇಳಿದೆ .
ರಿಯಾಕ್ಟರ್ , ಪ್ಲಾಸ್ಟಿಕ್ ಮತ್ತು ಕಾರ್ಬನ್ ಡೈಆಕ್ಸೈಡ್ (CO2) ಗಳನ್ನು ವಿವಿಧ ಉತ್ಪನ್ನಗಳಾಗಿ ವಿಂಗಡಿಸುವುದರಿಂದ ಇದು ಕೈಗಾರಿಕೆಗಳ ವ್ಯಾಪ್ತಿಯಲ್ಲಿ ಉಪಯುಕ್ತವಾಗಲಿದೆ. ಪ್ರಯೋಗದ ವೇಳೆ ಕಾರ್ಬನ್ ಡೈಆಕ್ಸೈಡ್ ಸಿಂಗಾಸ್ ಆಗಿ ಪರಿವರ್ತಿಸಲಾಯಿತು. ಪ್ಲಾಸ್ಟಿಕ್ ಬಾಟಲಿಗಳನ್ನು ಗ್ಲೈಕೋಲಿಕ್ ಆಮ್ಲವಾಗಿ ಪರಿವರ್ತಿಸಲಾಯಿತು, ಇದನ್ನು ಸೌಂದರ್ಯವರ್ಧಕ ಉದ್ಯಮದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.
"ಪ್ಲಾಸ್ಟಿಕ್ ನಿಂದಾಗುವ ಪರಿಸರ ಮಾಲಿನ್ಯವು ಪ್ರಪಂಚದಾದ್ಯಂತ ಒಂದು ದೊಡ್ಡ ಸಮಸ್ಯೆಯಾಗಿದೆ. ಅಲ್ಲದೆ ಮರುಬಳಕೆ ಅನೇಕ ಪ್ಲಾಸ್ಟಿಕ್ಗಳನ್ನು ಕೂಡಾ ನಾವು ಸುಟ್ಟುಹಾಕಲ್ಪಡುತ್ತವೆ ಇದು ಭೂಮಿ ಮೇಲ್ಮೈ ಭರ್ತಿಯಾಗುವುದರೊಂದಿಗೆ ಕೊನೆಗೊಳ್ಳುತ್ತವೆ. ಹೀಗಾಗಿ ಸೌರ ಶಕ್ತಿಯನ್ನು ಬಳಸಿಕೊಂಡು ತ್ಯಾಜ್ಯವನ್ನು ಉಪಯುಕ್ತವಾಗಿ ಪರಿವರ್ತಿಸುವುದು ನಮ್ಮ ಸಂಶೋಧನೆಯ ಪ್ರಮುಖ ಗುರಿಯಾಗಿದೆ" ಎಂದು ಹಿರಿಯ ಲೇಖಕ ಪ್ರೊಫೆಸರ್ ಎರ್ವಿನ್ ರೈಸ್ನರ್ ಹೇಳಿದ್ದಾರೆ.
"ಸಾಮಾನ್ಯವಾಗಿ, CO2 ಪರಿವರ್ತನೆಗೆ ಹೆಚ್ಚಿನ ಶಕ್ತಿಯ ಅಗತ್ಯವಿರುತ್ತದೆ, ಆದರೆ ನಾವು ಮೂಲಭೂತವಾಗಿ ಸಿಗುವ ಸೌರ ಶಕ್ತಿ ಬಳಸಿಕೊಂಡು ಹಾನಿಕಾರಕ ಉತ್ಪನ್ನಗಳನ್ನು ಉಪಯುಕ್ತ ಮತ್ತು ಸಮರ್ಥನೀಯವಾಗಿ ಪರಿವರ್ತಿಸಲು ಈ ಯೋಜನೆ ಉಪಕಾರಿಯಾಗಿದೆ" ಪ್ರೊಫೆಸರ್ ಡಾ ಮೋಟಿಯಾರ್ ರಹಮಾನ್ ಹೇಳಿದ್ದಾರೆ.