ಜಗತ್ತು, ಜ 10 (DaijiworldNews/HR): ವೈರ್ಲೆಸ್ ತಂತ್ರಜ್ಞಾನಗಳು ನಮ್ಮ ಪ್ರಪಂಚವನ್ನು ಬದಲಾಯಿಸಿವೆ, ನಮ್ಮ ಭೌತಿಕ ಜಗತ್ತಿನಲ್ಲಿ ಹೆಚ್ಚು ಹೆಚ್ಚು ವಸ್ತುಗಳು ಇಂಟರ್ನೆಟ್ಗೆ ಸಂಪರ್ಕಗೊಂಡಿದ್ದು, ಈಗಷ್ಟೇ ನಾವು 5ಜಿ ವೈರ್ಲೆಸ್ ತಂತ್ರಜ್ಞಾನದ ಪ್ರಯೋಜನವನ್ನು ಪಡೆದುಕೊಳ್ಳಲು ಪ್ರಾರಂಭಿಸಿರುವಾಗ, ಪ್ರಪಂಚದಾದ್ಯಂತದ ಸಂಶೋಧಕರು ಈಗಾಗಲೇ ಭವಿಷ್ಯದ ಕುರಿತು ಶ್ರಮಿಸುತ್ತಿದ್ದಾರೆ.
ವಿಸಿಬಲ್ ಲೈಟ್ ಕಮ್ಯುನಿಕೇಶನ್ (ವಿಎಲ್ಸಿ) (ವೈರ್ಲೆಸ್ ತಂತ್ರಜ್ಞಾನ)ಅನ್ನು ಮುಂಬರುವ 6G ನೆಟ್ವರ್ಕ್ಗಳಿಗೆ ಭರವಸೆಯ ತಂತ್ರಜ್ಞಾನವೆಂದು ವ್ಯಾಪಕವಾಗಿ ಪರಿಗಣಿಸಲಾಗಿದೆ.
ಮ್ಯಾಸಚೂಸೆಟ್ಸ್ ಆಮ್ಹೆರ್ಸ್ಟ್ ವಿಶ್ವವಿದ್ಯಾನಿಲಯದ ಸಂಶೋಧಕರ ತಂಡವು ಮಾನವ ದೇಹವನ್ನು ಆಂಟೆನಾವಾಗಿ ಬಳಸಿಕೊಂಡು ವೈರ್ಲೆಸ್ ತಂತ್ರಜ್ಞಾನದಿಂದ ತ್ಯಾಜ್ಯ ಶಕ್ತಿಯನ್ನು ಬಳಸಿಕೊಳ್ಳಲು ಹೊಸ ಮಾರ್ಗವನ್ನು ಕಂಡುಹಿಡಿದಿದೆ.
ಇನ್ನು ಈ ತ್ಯಾಜ್ಯ ಶಕ್ತಿಯನ್ನು ಧರಿಸಬಹುದಾದ ಸಾಧನಗಳ ಒಂದು ಶ್ರೇಣಿಯನ್ನು ಶಕ್ತಿಯುತಗೊಳಿಸಲು ಮರುಬಳಕೆ ಮಾಡಬಹುದು.