ಕಾಬುಲ್, ಜ 12 (DaijiworldNews/DB): ಅಪ್ಘಾನಿಸ್ತಾನ ರಾಜದಾನಿಯಲ್ಲಿ ಬುಧವಾರ ನಡೆದ ಬಾಂಬ್ ಸ್ಪೋಟದಲ್ಲಿ ಐವರು ಬಲಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಳಿಯ ಹೊಣೆಯನ್ನು ಗುರುವಾರ ಇಸ್ಲಾಮಿಕ್ ಸ್ಟೇಟ್ ಸಂಘಟನೆಯು ಹೊತ್ತುಕೊಂಡಿದೆ.
ಕಾಬೂಲ್ ವಿದೇಶಾಂಗ ಸಚಿವಾಲಯದ ಬಳಿ ಈ ಮಾರಣಾಂತಿಕ ಬಾಂಬ್ ಸ್ಪೋಟ ನಡೆದಿತ್ತು. ಖೈಬರ್ ಅಲ್-ಕಂದಹರಿ ಎಂಬ ಆತ್ಮಾಹುತಿ ದಾಳಿಕೋರ ಸಚಿವಾಲಯದ ಮುಖ್ಯ ದ್ವಾರದಿಂದ ನೌಕರರು ಮತ್ತು ಗಾರ್ಡ್ಗಳು ಹೊರ ಹೋಗುತ್ತಿದ್ದ ವೇಳೆ ತನ್ನನ್ನು ತಾನೇ ಸ್ಪೋಟಿಸಿಕೊಂಡಿದ್ದ. ಪರಿಣಾಮ ಐವರು ಬಲಿಯಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಹೊತ್ತುಕೊಂಡಿದೆ ಎಂದು ತಿಳಿದು ಬಂದಿದೆ. ಆದರೆ ಈ ಸಂಬಂಧ ತಾಲಿಬಾನ್ ಆಡಳಿತ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಈ ವರ್ಷದಲ್ಲಿ ಕಾಬೂಲ್ನಲ್ಲಿ ನಡೆದ ಎರಡನೇ ಪ್ರಮುಖ ದಾಳಿ ಇದಾಗಿದ್ದು, ತಾಲಿಬಾನ್ ಗಸ್ತು ಮತ್ತು ಶಿಯಾ ಅಲ್ಪಸಂಖ್ಯಾತ ಸಮುದಾಯದವರನ್ನು ಗುರಿಯಾಗಿಸಿಕೊಂಡು ನಡೆದಿದೆ ಎನ್ನಲಾಗಿದೆ.
ನಿನ್ನೆ ನಡೆದ ದಾಳಿಯಲ್ಲಿ ಐವರು ಸಾವನ್ನಪ್ಪಿದ್ದರೆ, 40ಕ್ಕೂ ಹೆಚ್ಚು ಗಾಯಾಳುಗಳನ್ನು ಕಾಬೂಲ್ನಲ್ಲಿರುವ ತುರ್ತು ಎನ್ಜಿಒ ನಡೆಸುತ್ತಿರುವ ಶಸ್ತ್ರಚಿಕಿತ್ಸಾ ಕೇಂದ್ರಕ್ಕೆ ಕರೆದೊಯ್ಯಲಾಗಿದೆ.