ಲೂಸಿಯಾನ, ಜ 15 ( DaijiworldNews/MS): ಯುಎಸ್ ಸುಂದರಿ ಆರ್’ಬೊನಿ ಗೇಬ್ರಿಯಲ್ ವಿಶ್ವ ಸುಂದರಿ ಕಿರೀಟವನ್ನ ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ಟಾಪ್ 16 ರ ಸ್ಥಾನದಲ್ಲಿದ್ದ ಮಿಸ್ ದಿವಾ ಯೂನಿವರ್ಸ್ ದಿವಿತಾ ರೈ ಅವರು ವಿಶ್ವ ಸುಂದರಿ ಪಟ್ಟದಿಂದ ವಂಚಿತರಾಗಿದ್ದಾರೆ.
ಲೂಸಿಯಾನದ ನ್ಯೂ ಓರ್ಲಿಯನ್ಸ್ನಲ್ಲಿರುವ ನ್ಯೂ ಓರ್ಲಿಯನ್ಸ್ ಮೋರಿಯಲ್ ಕನ್ವೆನ್ಷನ್ ಸೆಂಟರ್ನಲ್ಲಿ ನಡೆದ 71ನೇ ವಿಶ್ವ ಸುಂದರಿ ಆವೃತ್ತಿಯಲ್ಲಿ ಫ್ಯಾಶನ್ ಡಿಸೈನರ್, ಮಾಡೆಲ್ ಆಗಿರುವ ಆರ್’ಬೊನಿ ಗೇಬ್ರಿಯಲ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.
ಫ್ಯಾಶನ್ ಡಿಸೈನರ್, ಮಾಡೆಲ್ ಜೊತೆಗೆ ಹೊಲಿಗೆಯ ಬೋಧಕರಾಗಿರುವ ವಿಶ್ವಸುಂದರಿ, ಆರ್'ಬೊನಿ ನೋಲಾ.ಎಂಬ ತಮ್ಮದೇ ಸಂಸ್ಥೆಯ ಸಿಇಓ ಆಗಿದ್ದಾರೆ.
ವಿಶ್ವ ಸುಂದರಿ ಪಟ್ಟ ಗೆದ್ದ ಪ್ರಶ್ನೆ ಯಾವುದು?
ನೀವು ವಿಶ್ವ ಸುಂದರಿ ಗೆದ್ದರೆ, ಇದು ಸಬಲೀಕರಣ ಮತ್ತು ಪ್ರಗತಿಪರತೆ ದರ್ಶಿಸಲು ನೀವು ಹೇಗೆ ಕೆಲಸ ಮಾಡುತ್ತೀರಿ?" ಎಂದು ಎಂಬ ಪ್ರಶ್ನೆಗೆ "ವಿನ್ಯಾಸಕಳಾಗಿ 13 ವರ್ಷಗಳಿಂದ ಹೊಲಿಯುತ್ತಿದ್ದೇನೆ. ನಾನು ಫ್ಯಾಷನ್ ಅನ್ನು ಒಳ್ಳೆಯದಕ್ಕಾಗಿ ಶಕ್ತಿಯಾಗಿ ಬಳಸುತ್ತೇನೆ. ನನ್ನ ಉದ್ಯಮದಲ್ಲಿ, ನಾನು ನನ್ನ ಬಟ್ಟೆಗಳನ್ನು ತಯಾರಿಸುವಾಗ ಮರುಬಳಕೆಯ ವಸ್ತುಗಳ ಮೂಲಕ ಮಾಲಿನ್ಯವನ್ನು ಕಡಿಮೆ ಮಾಡುತ್ತಿದ್ದೇನೆ. ಮಾನವ ಕಳ್ಳಸಾಗಣೆ ಮತ್ತು ಕೌಟುಂಬಿಕ ಹಿಂಸೆಯ ಸಂತ್ರಸ್ತ ಮಹಿಳೆಯರಿಗೆ ನಾನು ಹೊಲಿಗೆ ತರಗತಿಗಳನ್ನು ಕಲಿಸುತ್ತೇನೆ. ನಾನು ಅದನ್ನು ಪರಿವರ್ತನೆಯ ನಾಯಕಿಯಾಗಲು ಬಳಸುತ್ತೇನೆ ಎಂದು ಹೇಳಿದರು".