ಬೀಜಿಂಗ್ ಜ 17 ( DaijiworldNews/MS): 60 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಚೀನಾದಲ್ಲಿ ಜನಸಂಖ್ಯೆ ಕುಸಿತ ಕಂಡಿದೆ.ಚೀನಾದ ನ್ಯಾಷನಲ್ ಬ್ಯೂರೋ ಆಫ್ ಸ್ಟ್ಯಾಟಿಸ್ಟಿಕ್ಸ್ ಪ್ರಕಾರ, ಹಿಂದಿನ ವರ್ಷಕ್ಕಿಂತ 2022ರ ಕೊನೆಯಲ್ಲಿ 8,50,000 ಕಡಿಮೆ ಜನರನ್ನು ಹೊಂದಿದೆ.
ಚೀನಾ ಹಿಂದಿನಿಂದಲೂ ಜನಸಂಖ್ಯೆ ಹೊಂದಿರುವ ದೇಶವಾಗಿತ್ತು. ಈ ಹಿಂದೆ 1960ರಲ್ಲಿ ಚೀನಾದ ಜನಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದ್ದು, ಅದಾದ 60 ವರ್ಷಗಳ ಬಳಿಕ ಈಗ ಮತ್ತೆ ಇಳಿಕೆ ಕಂಡು ಬಂದಿದೆ. 1960ರಲ್ಲಿ ಚೀನಾ ಕಂಡರಿಯದಂತಹ ಬರ ಪರಿಸ್ಥಿತಿಯನ್ನು ಎದುರಿಸಿದ್ದು, ಇದರಿಂದಾಗಿ ಜನಸಂಖ್ಯೆಯಲ್ಲಿ ಇಳಿಕೆಯಾಗಿತ್ತು.
2022ರ ಕೊನೆಯಲ್ಲಿ ಚೀನಾದ ಜನಸಂಖ್ಯೆ 1,411.75 ಮಿಲಿಯನ್ ಎಂದು ಅಂಕಿ ಅಂಶದಲ್ಲಿ ದಾಖಲಾಗಿದ್ದು, ಈ ಮೂಲಕ ಜನಸಂಖ್ಯೆಯಲ್ಲಿ ಶೇ.0.85 ರಷ್ಟು ಇಳಿಕೆಯಾದಂತಾಗಿದೆ.
ಚೀನಾದಲ್ಲಿ ಈ ಮೊದಲು ಜನಸಂಖ್ಯೆ ಅತ್ಯಂತ ವೇಗದಲ್ಲಿ ಏರಿಕೆಯಾಗಿದ್ದ ಕಾರಣ 1980 ರಲ್ಲಿ 'ಒಂದೇ ಮಗು' ನೀತಿಯನ್ನು ಜಾರಿಗೆ ತರಲಾಗಿತ್ತು.