ಪ್ಯಾರಿಸ್, ಜ 17 ( DaijiworldNews/MS): ಜಗತ್ತಿನ ಅತ್ಯಂತ ದೀರ್ಘಾಯುಷಿ ಎಂದು ಕರೆಸಿಕೊಂಡಿದ್ದ ಫ್ರಾನ್ಸ್ನ ಲೂಸಿಲ್ ರ್ಯಾಂಡನ್ ತಮ್ಮ 118ನೇ ವಯಸ್ಸಿಗೆ ನಿನ್ನೆ ಸಾವನ್ನಪ್ಪಿದ್ದಾರೆ.
ದಕ್ಷಿಣ ಪ್ರಾನ್ಸ್ನಲ್ಲಿ ಮಹಾಯುದ್ದದ ಮೊದಲು 1904ರ ಫೆ.11ರಂದು ಜನಿಸಿದ್ದ ಇವರನ್ನು ಸಿಸ್ಟರ್ ಆಂಡ್ರೆ ಎಂದೇ ಕರೆಯಲಾಗಿತ್ತು. ಜಗತ್ತಿನ ಅತ್ಯಂತ ದೀರ್ಘಾಯುಷಿ ಜಪಾನ್ನ ಕೇನ್ ತನಾಕಾ 119ನೇ ವಯಸ್ಸಿನಲ್ಲಿ ಕಳೆದ ವರ್ಷ ಮೃತಪಟ್ಟಿದ್ದರು.
ನಂತರದ ಹಿರಿಯ ವಯಸ್ಸಿನ ವ್ಯಕ್ತಿ ಲೂಸಿಲ್ ಆಗಿದ್ದು, ಈಕೆ ಪ್ಯಾರಿಸ್ನಲ್ಲಿ ಶಿಶುಪಾಲಕಿಯಾಗಿ ಕೆಲಸ ಮಾಡುತ್ತಿದ್ದರು.