ಕಂದಾಹಾರ್, ಜ 18 (DaijiworldNews/HR): ದರೋಡೆ ಹಾಗೂ ವಿಕೃತಕಾಮದ ಆರೋಪದಲ್ಲಿ ಬಂಧಿಸಲ್ಪಟ್ಟ ಒಂಬತ್ತು ಮಂದಿ ಆರೋಪಿಗಳಿಗೆ ಅಫ್ಘಾನಿಸ್ತಾನ್ ತಾಲಿಬಾನ್ ಬಹಿರಂಗವಾಗಿ ಶಿಕ್ಷೆ ವಿಧಿಸಿರುವ ಘಟನೆ ನಡೆದಿದೆ.
ಬಹಿರಂಗ ಸ್ಥಳದಲ್ಲಿ ನಾಲ್ಕು ಮಂದಿಯ ಕೈ ಕತ್ತರಿಸಲಾಗಿದ್ದು, ಉಳಿದ ಐದು ಆರೋಪಿಗಳಿಗೆ 35ರಿಂದ 39 ಚಾಟಿ ಏಟು ನೀಡಲಾಗಿದೆ ಎಂದು ಪ್ರಾಂತೀಯ ಗವರ್ನರ್ ವಕ್ತಾರ ಹಾಜಿ ಝೈದ್ ತಿಳಿಸಿರುವುದಾಗಿ ವರದಿಯಾಗಿದೆ.
ಇನ್ನು ಅಂತಾರಾಷ್ಟ್ರೀಯ ಸಮುದಾಯದ ಖಂಡನೆಯ ನಡುವೆಯೂ ತಾಲಿಬಾನ್ ಆರೋಪಿಗಳನ್ನು ಸಾರ್ವಜನಿಕವಾಗಿ ಹತ್ಯೆಗೈಯುವುದು, ಕೈ ಕತ್ತರಿಸುವುದು, ಚಾಟಿ ಏಟಿನ ಶಿಕ್ಷೆಯನ್ನು ಮುಂದುವರಿಸಿರುವುದಾಗಿ ವರದಿಯಾಗಿದೆ.