ಕೊಲೊಂಬಿಯಾ,ಮಾ 11 (MSP): ವಿಮಾನವೊಂದು ಪತನವಾಗಿದ್ದು ಮೇಯರ್ ಕುಟುಂಬ ಸೇರಿ 12 ಜನರ ಸಾವನ್ನಪ್ಪಿರುವ ಘಟನೆ ಕೊಲೊಂಬಿಯಾದಲ್ಲಿ ಸಂಭವಿಸಿದೆ.
ಈ ವಿಮಾನ ಅಮೆರಿಕನ್ ನಿರ್ಮಿತವಾಗಿದ್ದು 1930ರ ದಶಕದಲ್ಲಿ ಮೊದಲ ಬಾರಿಗೆ ಉತ್ಪಾದಿಸಲ್ಪಟ್ಟ ವಿಮಾನವಾಗಿತ್ತು. ಮಾತ್ರವಲ್ಲದೆ ಅವಳಿ ಎಂಜಿನ್ ಗಳನ್ನು ಈ ವಿಮಾನ ಹೊಂದಿತ್ತು.
ಅವಳಿ ಎಂಜಿನ್ ಪ್ರೊಪೆಲ್ಲರ್ ಪ್ಲೇನ್ ಡೌಗ್ಲಾನ್ DC-3 ವಿಮಾನವು ಸ್ಯಾನ್ ಜೋಸ್ ಡೆಲ್ ಗುವಿಯಾರೆ ಮತ್ತು ವಿಲ್ಲವಿಸೆನ್ಸಿಯೊ ನಗರಗಳ ನಡುವೆ ಪತನಗೊಂಡಿದ್ದು ಪರಿಣಾಮ 12 ಜನ ಸಾವಿಗೀಡಾಗಿದ್ದಾರೆ.
ವಿಮಾನದಲ್ಲಿ ತರೈರಾ ಮುನಿಸಿಪಾಲಿಟಿ ಮೇಯರ್ ಡೊರಿಸ್ ವಿಲೆಗಾಸ್, ಆಕೆಯ ಪತಿ ಮತ್ತು ಪುತ್ರಿ, ವಿಮಾನದ ಮಾಲೀಕರು, ಪೈಲಟ್ ಜೈಮ್ ಕಾರಿಲ್ಲೋ, ಕೋ-ಪೈಲಟ್ ಜೈಮ್ ಹೆರೆರಾ ಮತ್ತು ಟೆಕ್ನಿಷನ್ ಸೇರಿ 12 ಜನ ಮೃತ ಪಟ್ಟಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿದೆ. ವಿಮಾನ ಹಾರಾಟ ನಡೆಸುತ್ತಿರುವ ಎಂಜಿನ್ ಫೇಲ್ ಆಗಿದ್ದು, ಆದರೂ ಪೈಲಟ್ ವಿಮಾನವನ್ನು ಲ್ಯಾಂಡಿಂಗ್ ಮಾಡಲು ಪ್ರಯತ್ನಿಸಿದ್ದಾರೆ. ಆದರೆ ಅದು ವಿಫಲವಾಗಿ ವಿಮಾನ ಪತನವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.