ಲಾಹೋರ್,ಜ 20 ( DaijiworldNews/MS): ವಿಶ್ವಸಂಸ್ಥೆಯು ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್ ಎ ತಯಬಾ (ಎಲ್ಇಟಿ) ಉಪ ನಾಯಕ ಅಬ್ದುಲ್ ರೆಹಮಾನ್ ಮಕ್ಕಿಯನ್ನು ಜಾಗತಿಕ ಭಯೋತ್ಫಾದಕ ಎಂದು ಗುರುತಿಸಿದೆ.
ಈ ಹಿನ್ನಲೆ ಗುರುವಾರ ಲಾಹೋರ್ನ ಕೋಟ್ ಲಖ್ಪತ್ ಜೈಲಿನಿಂದ ವಿಡಿಯೊ ಬಿಡುಗಡೆ ಮಾಡಿ ಭಾರತದ ವಿರುದ್ದ ಕಿಡಿಕಾರಿರುವ ಮಕ್ಕಿ, ಭಾರತ ಸರ್ಕಾರ ನನ್ನ ವಿರುದ್ಧ ನೀಡಿರುವ ಸುಳ್ಳು ಮಾಹಿತಿ ಆಧಾರಿಸಿ ಜಾಗತಿಕ ಉಗ್ರ ಎಂದು ಹಣೆಪಟ್ಟಿ ಕಟ್ಟಲಾಗಿದೆ. ನಾನು ಈ ಹಿಂದೆ ಒಸಾಮಾ ಬಿನ್ ಲಾಡೆನ್, ಅಯ್ಮನ್ ಅಲ್-ಜವಾಹಿರಿ ಅಥವಾ ಅಬ್ದುಲ್ಲಾ ಅಜಮ್ ಅವರನ್ನು ಭೇಟಿಯಾಗಿದ್ದೇನೆ ಎಂಬ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಮಕ್ಕಿ ಹೇಳಿದ್ದಾನೆ.
ಭಾರತ ಮತ್ತು ಅಮೆರಿಕದ ಪ್ರಸ್ತಾವನೆ ಒಪ್ಪಿರುವ ವಿಶ್ವಸಂಸ್ಥೆ ಭದ್ರತಾ ಮಂಡಳಿಯ 1267 ಅಲ್ ಖೈದಾ ನಿರ್ಬಂಧಗಳ ಸಮಿತಿಯು ಸೋಮವಾರ ಜಾಗತಿಕ ಭಯೋತ್ಪಾದಕರ ಪಟ್ಟಿಗೆ 68 ವರ್ಷದ ಮಕ್ಕಿಯನ್ನು ಸೇರಿಸಿತ್ತು. ಇದನ್ವರಯ ಮಕ್ಕಿಯ ಆಸ್ತಿಗಳ ಸ್ಥಗಿತ, ಪ್ರಯಾಣ ನಿಷೇಧ ಮತ್ತು ಶಸ್ತ್ರಾಸ್ತ್ರ ನಿರ್ಬಂಧ ಹೇರಲಾಗುತ್ತದೆ.
ಪ್ರಸ್ತುತ ಲಾಹೋರ್ನ ಕೋಟ್ ಲಖ್ಪತ್ ಜೈಲಿನಲ್ಲಿ ಬಂಧಿಯಾಗಿರುವ 68 ವರ್ಷದ ಮಕ್ಕಿಯನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿಯ 1267 ಅಲ್ ಖೈದಾ ನಿರ್ಬಂಧಗಳ ಸಮಿತಿಯು ಸೋಮವಾರ ಜಾಗತಿಕ ಭಯೋತ್ಪಾದಕರ ಪಟ್ಟಿಗೆ ಸೇರಿಸಿತ್ತು.