ಯುಎಸ್, ಜ 20 (DaijiworldNews/DB): ಪ್ರಾಣಿಗಳ ಮೇಲೆ ಅತಿಯಾದ ಪ್ರೀತಿ ಕೆಲವು ಮಂದಿಗೆ ಅವುಗಳನ್ನು ಬಿಟ್ಟು ಒಂದು ಕ್ಷಣವೂ ಇರಲಾಗದಷ್ಟು ಮಟ್ಟಕ್ಕೆ ಕೊಂಡೊಯ್ಯುತ್ತದೆ. ಆದರೆ ಇಲ್ಲೊಬ್ಬ ತೃತೀಯಲಿಂಗಿ ಮಹಿಳೆ ಡ್ರ್ಯಾಗನ್ ಮೇಲಿನ ಪ್ರೀತಿಯಿಂದಾಗಿ ಡ್ರ್ಯಾಗನ್ನಂತೆಯೇ ಕಾಣಬೇಕೆಂದು ತನ್ನ ದೇಹವನ್ನೇ ಮಾರ್ಪಾಡು ಮಾಡಿಕೊಂಡಿದ್ದಾಳೆ. ಇದಕ್ಕಾಗಿ ಆಕೆ ತನ್ನ ಕಿವಿ, ಮೂಗಿನ ಹೊಳ್ಳೆಗಳನ್ನೂ ತೆಗೆದು ಹಾಕಿದ್ದಾಳೆ!
ಮಾಧ್ಯಮವೊಂದರ ವರದಿ ಪ್ರಕಾರ, ಮಾಜಿ ಬ್ಯಾಂಕರ್ ಟಿಯಾಮತ್ ಇವಾ ಮೆಡುಸಾ ಎಂಬ ಮಹಿಳೆ ಡ್ರ್ಯಾಗನ್ ರೂಪಕ್ಕೆ ಬದಲಾದವರು. ಈ ರೀತಿಯ ಮನುಷ್ಯರನ್ನು ಥೆರಿಯನ್ಸ್ ಎಂದು ಕರೆಯಲಾಗುತ್ತದೆ. ಈಕೆ ಡ್ರ್ಯಾಗನ್ನಂತೆ ಕಾಣಲು ತನ್ನ ಮೂಗಿನ ಹೊಳ್ಳೆ, ಕಿವಿಗಳನ್ನು ತೆಗೆದು ಹಾಕಿದ್ದಾಳೆ. ಕಣ್ಣನ್ನು ಹಸಿರು ಬಣ್ಣಕ್ಕೆ ಬದಲಾಯಿಸಿಕೊಂಡಿದ್ದು, ಕೊಂಬು ಮತ್ತು ಹಚ್ಚೆ ಮಾಪಕದಿಂದ ದೇಹವನ್ನು ಡ್ರ್ಯಾಗನ್ ರೂಪಕ್ಕೆ ಪರಿವರ್ತಿಸಿಕೊಂಡಿದ್ದಾಳೆ. ಇನ್ನು ಕವಲೊಡೆದ ನಾಲಿಗೆಯನ್ನು ಪಡೆದುಕೊಳ್ಳಲು ಆಕೆ ಸಾವಿರಾರು ಪೌಂಡ್ಗಳನ್ನು ಖರ್ಚು ಮಾಡಿದ್ದಾಳೆ.
ಡ್ರ್ಯಾಗನ್ ರೂಪಕ್ಕೆ ಬದಲಾದ ಬಳಿಕ ತನ್ನ ಇನ್ಸ್ಟಾಗ್ರಾಂನಲ್ಲಿ ಆಕೆ ತನ್ನ ಫೋಟೋವನ್ನು ಪೋಸ್ಟ್ ಮಾಡಿದ್ದಾಳೆ. ಇನ್ನು ಡ್ರ್ಯಾಗನ್ ರೀತಿ ಕಾಣಿಸಿಕೊಳ್ಳಬೇಕೆಂಬ ಈಕೆಯ ತುಡಿತದ ಹಿಂದೆ ಕಣ್ಣೀರಿನ ಕತೆಯೂ ಇದೆ. ತಾರತಮ್ಯ, ನಿಂದನೆ, ಲೈಂಗಿಕ ಹಿಂಸೆಯಿಂದ ನೊಂದ ಮೆಡುಸಾ, ತಾನು ಮನುಷ್ಯರೊಂದಿಗೆ ಗುರುತಿಸಿಕೊಳ್ಳುವುದನ್ನೇ ನಿಲ್ಲಿಸಿದ್ದಳು. ಇದರಿಂದಾಗಿಯೇ ಆರ್ಧ ಮಾನವ, ಅರ್ಧ ಸರೀಸೃಪ ಜೀವಿಯಾಗುವ ಯೋಚನೆ ಮನದಲ್ಲಿ ಮೂಡಿತ್ತು. ಈ ಬಗ್ಗೆ ಸ್ವತಃ ಆಕೆಯೇ ಮಾಧ್ಯಮವೊಂದರ ಸಂದರ್ಶನದಲ್ಲಿ ಹೇಳಿಕೊಂಡಿದ್ದಾಳೆ.